ಕರ್ನಾಟಕ

karnataka

ETV Bharat / city

ಕರಾವಳಿಯಲ್ಲಿ ಬಿರುಸಿನ ಮಳೆ... ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ - undefined

ಕರಾವಳಿಯಲ್ಲಿ ಸಮುದ್ರದಲ್ಲಿನ ಅಲೆಗಳ ಆರ್ಭಟ ಜೋರಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿಯಲ್ಲಿ ಬಿರುಸಿನ ಮಳೆ...ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ

By

Published : Jul 10, 2019, 10:52 AM IST

ಮಂಗಳೂರು:ಮುಂಗಾರು ಪ್ರವೇಶವಾದರೂ ಕರಾವಳಿಯಲ್ಲಿ ಕೈಕೊಟ್ಟಿದ್ದ ಮಳೆ, ನಿನ್ನೆಯಿಂದ ಬಿರುಸು ಪಡೆದಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿಯಲ್ಲಿ ಬಿರುಸಿನ ಮಳೆ...ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ

ನಿನ್ನೆ ಸಂಜೆಯ ವೇಳೆಗೆ ಅರಬ್ಬಿ ಸಮುದ್ರದಲ್ಲಿ 3.5 ರಿಂದ 4 ಮೀಟರ್​ ಎತ್ತರದಲ್ಲಿ ಅಲೆಗಳು ರಭಸದಿಂದ ತೀರಕ್ಕೆ ಅಪ್ಪಳಿಸುತ್ತಿದ್ದು, ಈ ಕಡಲಬ್ಬರವು ನಾಳೆಯವರೆಗೂ ಮುಂದುವರಿಯಲಿದೆ. ಅಲ್ಲದೇ, ಮಂಗಳೂರಿನಿಂದ ಕಾರವಾರದವರೆಗೂ ಅಲೆಗಳ ಆರ್ಭಟ ಅಪಾಯಕಾರಿಯಾಗಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ‌.

ಈ ಹಿನ್ನೆಲೆ, ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ನೈರುತ್ಯ ಹಾಗೂ ಅರಬ್ಬಿ ಸಮುದ್ರದಲ್ಲಿ 40 ರಿಂದ 50 ಕಿ.ಮೀ.ವರೆಗೆ ಬಿರುಗಾಳಿ ಬೀಸಲಿದೆ‌. ಇದೇ ರೀತಿ, ಜುಲೈ 13ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದ್ದು, ಮೀನುಗಾರರು ಕಡಲಿಗಿಳಿಯದಂತೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

For All Latest Updates

TAGGED:

ABOUT THE AUTHOR

...view details