ಮಂಗಳೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದು, ಇದರ ಬಗ್ಗೆ ಈಗಾಗಲೇ ಅನೇಕರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಈ ವಿವಾದದ ಬಗ್ಗೆ ನಾನೇನು ಪ್ರತಿಕ್ರಿಸೋಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದ್ದಾರೆ.
ಹಿಜಾಬ್ ವಿವಾದದ ಬಗ್ಗೆ ನಾನೇನು ಪ್ರತಿಕ್ರಿಯಿಸೋಲ್ಲ: ಹೆಚ್.ಡಿ.ದೇವೇಗೌಡ - ಹಿಜಾಬ್ ವಿವಾದದ ಬಗ್ಗೆ ಹೆಚ್ಡಿಕೆ ಮಾತು
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹಿಂದೇಟು ಹಾಕಿದ್ದಾರೆ. ಈ ವಿವಾದ ಹೈಕೋರ್ಟ್ನಲ್ಲಿದ್ದು, ನಾನು ಏನನ್ನೂ ಹೇಳಲ್ಲ ಎಂದಿದ್ದಾರೆ.

HD Devegowda on Hijab row
ಹಿಜಾಬ್ ವಿವಾದದ ಬಗ್ಗೆ ನಾನೇನು ಪ್ರತಿಕ್ರಿಯಿಸೋಲ್ಲ: ಹೆಚ್.ಡಿ.ದೇವೇಗೌಡ
ಇದನ್ನೂ ಓದಿರಿ:ರಾಜ್ಯದ ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ವದಂತಿಗೆ ಸಚಿವ ಅಶ್ವತ್ಥ ನಾರಾಯಣ ಸ್ಪಷ್ಟನೆ
ಮೂರು ದಿನಗಳ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸದಲ್ಲಿರುವ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ನಾಳೆ ಬೆಳಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಮಂಗಳೂರಿನ ಉಳ್ಳಾಲದ ಯುನಿಟಿ ಹಾಲ್ ನಲ್ಲಿ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.
Last Updated : Feb 11, 2022, 11:18 PM IST