ಕರ್ನಾಟಕ

karnataka

ETV Bharat / city

ಖಾದರ್​ಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ: ಹರೀಶ್ ಕುಮಾರ್ - ಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ನ್ಯೂಸ್​

ಸಿಎಎ ಪರ ಜಾಥದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಕೆಲವು ಯುವಕರು ಘೋಷಣೆ ಕೂಗಿ ಜೀವ ಬೆದರಿಕೆಯೊಡ್ಡಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಸುಮೊಟೊ ಪ್ರಕರಣ ದಾಖಲಿಸಬೇಕೆಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.

Harish Kumar press meet in manglore
ಹರೀಶ್ ಕುಮಾರ್ ಸುದ್ದಿಗೋಷ್ಠಿ

By

Published : Jan 29, 2020, 2:52 PM IST

ಮಂಗಳೂರು: ಸಿಎಎ ಪರ ಜಾಥದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಕೆಲವು ಯುವಕರು ಘೋಷಣೆ ಕೂಗಿ ಜೀವ ಬೆದರಿಕೆಯೊಡ್ಡಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಸುಮೊಟೊ ಪ್ರಕರಣ ದಾಖಲಿಸಬೇಕೆಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.

ಹರೀಶ್ ಕುಮಾರ್ ಸುದ್ದಿಗೋಷ್ಠಿ

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ದೂರು ನೀಡುವುದಿಲ್ಲ.‌ ಕಮೀಷನರ್ ಅವರೆ ಸುಮೊಟೊ ಪ್ರಕರಣ ದಾಖಲಿಸಬೇಕು. ಎರಡು ವಾರದೊಳಗೆ ಬೆದರಿಕೆಯೊಡ್ಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಖಾದರ್ ಅವರು ಎಲ್ಲಾ ಜನಾಂಗದವರನ್ನು, ಎಲ್ಲರನ್ನೂ ಪ್ರೀತಿಸುವ ನಾಯಕ. ಅವರಿಗೆ ಕೊಲೆ ಬೆದರಿಕೆಯೊಡ್ಡಲಾಗಿದೆ. ಇದರಿಂದ ಭಯೋತ್ಪಾದಕರು ಯಾರು ಎಂದು ತಿಳಿಯುತ್ತದೆ. ಸರ್ಕಾರದ ನೀತಿ ನಿಯಮಗಳನ್ನು ಟೀಕಿಸಿದರೆ ದೇಶದ್ರೋಹ ಎಂದು ಕರೆಯುತ್ತಾರೆ. ತಲೆ ಕೈ ಕಾಲು ಕಡಿಯುವ ಘೋಷಣೆ ಕೂಗುವವರನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದರು. ಇದೇ ರೀತಿಯ ಬೆದರಿಕೆಯನ್ನು ಹಿಂದೆ ಮಾಜಿ ಸಚಿವ ರಮಾನಾಥ ರೈ ಮೇಲೆ ಹಾಕಲಾಗುತ್ತಿತ್ತು. ಈಗ ಖಾದರ್ ಮೇಲೆ ಹಾಕುತ್ತಿದ್ದಾರೆ. ರಮಾನಾಥ ರೈ, ಮಿಥುನ್ ರೈ, ಖಾದರ್, ವಿನಯಕುಮಾರ್ ಸೊರಕೆಯವರಿಗೆ ಮುಂಬೈನಿಂದ ಬೆದರಿಕೆ ಕರೆಗಳು ಬರುತ್ತಿದೆ. ವಿರೋಧಿಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಕಣ್ಗಾವಲಿನಲ್ಲಿ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಟೀಕಿಸಿದರು.

ABOUT THE AUTHOR

...view details