ಕರ್ನಾಟಕ

karnataka

ETV Bharat / city

ಮಹಿಳೆಯ ಮಾನಭಂಗ ಯತ್ನ.. ವಿಟ್ಲ ಠಾಣೆಗೆ ದೂರು

ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಗ್ರಾಮದಲ್ಲಿ ವಿವಾಹಿತ ಮಹಿಳೆಯ ಮನೆಗೆ ಬಂದ ಸಾದಿಕ್ ಎಂಬ ಹೆಸರಿನ ಯುವಕನೊಬ್ಬ ಆಕೆಯ ಮಾನಭಂಗಕ್ಕೆ ಯತ್ನಿಸಿರುವುದಾಗಿ ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ.

Harassmentof a married woman..Complaint at Whitley Police Station
ವಿವಾಹಿತ ಮಹಿಳೆಯ ಮಾನಭಂಗ ಯತ್ನ..ವಿಟ್ಲ ಠಾಣೆಯಲ್ಲಿ ದೂರು ದಾಖಲು

By

Published : Aug 2, 2020, 8:57 PM IST

ಬಂಟ್ವಾಳ (ದಕ್ಷಿಣ ಕನ್ನಡ):ವಿವಾಹಿತ ಮಹಿಳೆಯ ಮನೆಗೆ ಬಂದ ಯುವಕನೊಬ್ಬ ಆಕೆಯ ಮಾನಭಂಗಕ್ಕೆ ಯತ್ನಿಸಿರುವುದಾಗಿ ವಿಟ್ಲ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತ್ರಸ್ತ ಮಹಿಳೆ ಈ ದೂರನ್ನು ದಾಖಲಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಗ್ರಾಮದಲ್ಲಿ ವಿವಾಹಿತ ಮಹಿಳೆಯ ಮನೆಗೆ ಬಂದ ಯುವಕನೊಬ್ಬ ಆಕೆಯ ಮಾನಭಂಗಕ್ಕೆ ಯತ್ನಿಸಿರುವುದಾಗಿ ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ. ಸಾದಿಕ್ ಎಂಬಾತ ಕರೆ ಹಾಗೂ ಸಂದೇಶ ಕಳುಹಿಸಿ ತೊಂದರೆ ಕೊಡುತ್ತಿದ್ದು, ಮಾನಭಂಗಕ್ಕೂ ಯತ್ನಿಸಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details