ಪುತ್ತೂರು: ಪರೀಕ್ಷಾ ಶುಲ್ಕ ಪಾವತಿಸಲು ಶಾಲೆಗೆ ಬಂದ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದು, ಪ್ರಕರಣ ದಾಖಲಾದ 48 ಗಂಟೆಗಳ ಒಳಗಾಗಿಯೇ ಬಂಧನಕ್ಕೊಳಗಾದ ಆರೋಪಿಗೆ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಭಾರ ಮುಖ್ಯ ಶಿಕ್ಷಕ ನಜೀರ್ ಜಾಮೀನು ಪಡೆದ ಆರೋಪಿ.

ಮರು ಪರೀಕ್ಷೆಯ ಶುಲ್ಕ ಪಾವತಿಸಲು ಬಂದ ವೇಳೆ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ ಎಂದು ಸಂತ್ರಸ್ತ ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಪುತ್ತೂರಿನ ಸಂಪ್ಯ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದೀಗ ಆರೋಪಿಗೆ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ.
ನಜೀರ್ ಸರ್ಕಾರಿ ನೌಕರನಾಗಿದ್ದು, ಅಂಗ ವೈಕಲ್ಯತೆ ಹೊಂದಿದ್ದಾನೆ. ಸರ್ಕಾರಿ ಉದ್ಯೋಗಿ 48 ಘಂಟೆಗಳಿಗಿಂತ ಅಧಿಕ ನ್ಯಾಯಾಂಗ ಬಂಧನಕ್ಕೊಳಗಾದರೆ ಸರ್ಕಾರಿ ನಿಯಮಾವಳಿಗಳಂತೆ ಆತ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಆತ ಶಾರೀರಿಕವಾಗಿ ವೈಖಲ್ಯತೆ ಹೊಂದಿದ್ದಾನೆ. ಮನೆಗೆ ಈತನ ಉದ್ಯೋಗವೇ ಆಧಾರ. ಸಂತ್ರಸ್ತೆಯ ದೂರು ಪೋಕ್ಸೋ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬಿತ್ಯಾದಿ ವಾದಗಳನ್ನು ನ್ಯಾಯಲಯ ಪುರಸ್ಕರಿಸಿ ಆರೋಪಿಗೆ ಷರತ್ತುಬದ್ದ ಜಮೀನು ನೀಡಿದೆ.