ಕರ್ನಾಟಕ

karnataka

ETV Bharat / city

ಆ ಮಹಾನುಭಾವ ಅಂದು 'ರಾಕ್ಷಸ ಸರ್ಕಾರ' ಅಂದಿದ್ರು, ಈಗ ಬಿಜೆಪಿ ಬಗ್ಗೆ ಅದೇ ಮಾತು ಹೇಳ್ತಿದ್ದಾರೆ : ಹೆಚ್​ಡಿಕೆ - mandya news

ಆತ ನಮ್ಮ ಸರ್ಕಾರದಲ್ಲಿದ್ದಾಗ 25 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದಕ್ಕೆ ನನ್ನ ರಾಕ್ಷಸ ನಿಲುವು ಎಂದ್ರು. ಬಡವರ ಬಂದು ಹೆಸರಿನಲ್ಲಿ ಬೀದಿ ವ್ಯಾಪಾರಿಗಳಿಗೆ ಕಾರ್ಯಕ್ರಮ ಕೊಟ್ಟಿದ್ದೆ. ಅದನ್ನೇ ರಾಕ್ಷಸ ಕಾರ್ಯಕ್ರಮ ಎಂದಿದ್ದ ಆ ಮಹಾನುಭಾವ ಎಂದು ವಿಶ್ವನಾಥ್​ ವಿರುದ್ಧ ​ಹೆಚ್​ಡಿಕೆ ಕಿಡಿಕಾರಿದ್ದಾರೆ.

  H D Kumaraswamy outrage against Vishwanath
H D Kumaraswamy outrage against Vishwanath

By

Published : Jun 17, 2021, 6:52 PM IST

Updated : Jun 17, 2021, 9:21 PM IST

ಮಂಡ್ಯ: ಆ ಮಹಾನುಭಾವ ನನ್ನ ಸರ್ಕಾರವನ್ನ ರಾಕ್ಷಸ ಸರ್ಕಾರ ಅಂದಿದ್ದರು. ಈಗ ಅವರ ಸರ್ಕಾರವನ್ನ ರಾಕ್ಷಸ ಸರ್ಕಾರ ಎನ್ನುವ ಮೂಲಕ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೊರಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹಳ್ಳಿ ಹಕ್ಕಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ ನಮ್ಮ ಸರ್ಕಾರದಲ್ಲಿದ್ದಾಗ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದಕ್ಕೆ ನನ್ನ ರಾಕ್ಷಸ ನಿಲುವು ಎಂದ್ರು. ಬಡವರ ಬಂದು ಹೆಸರಿನಲ್ಲಿ ಬೀದಿ ವ್ಯಾಪಾರಿಗಳಿಗೆ ಕಾರ್ಯಕ್ರಮ ಕೊಟ್ಟಿದ್ದೆ. ಅದನ್ನೇ ರಾಕ್ಷಸ ಕಾರ್ಯಕ್ರಮ ಎಂದಿದ್ದ ಆ ಮಹಾನುಭಾವ ಎಂದು ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಇದು ಯಾವ ಸರ್ಕಾರನೋ ಗೊತ್ತಿಲ್ಲಾ‌. ವಿಶ್ವನಾಥ್ ಅವರಿಗೆ ಅಧಿಕಾರ ಸಿಕ್ಕಿಲ್ಲ ಎಂಬ ನೋವಿದೆ. ಆ ನೋವಿನಲ್ಲಿ ಹೇಳ್ತಿದ್ದಾರೆ ಅಷ್ಟೆ. ಈಗಿನ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿರುವ ಸರ್ಕಾರ ಇದು ಎಂದರಲ್ಲದೇ ಜನರ ಹೆಸರಲ್ಲಿ ಲೂಟಿ ಮಾಡ್ತಿದ್ದಾರೆ‌. ಇದ್ದನ್ನ ತಡೆಗಟ್ಟಲು ಜನತೆಯೇ ತಿರ್ಮಾನ ತೆಗೆದುಕೊಳ್ಳಬೇಕು ಎಂದರು.

ಮನ್ ಮುಲ್ ಹಗರಣ:

ಮಂಡ್ಯ ಮನ್ಮುಲ್ ನೀರು ಹಾಲು ಮಿಶ್ರಿತ ಹಗರಣವನ್ನ COD ತನಿಖೆ ಇಲ್ಲದಿದ್ದರೆ CID ತನಿಖೆ ಮಾಡಿಕೊಳ್ಳಿ. ಆದ್ರೆ ಮನ್ಮುಲ್ ನಡೆದಿರುವ ಅಕ್ರಮವನ್ನ ಹೊರತರುವುದು ಸರ್ಕಾರದ ಜವಾಬ್ದಾರಿ ಎಂದರು.

ಯಾರೇ ತಪ್ಪು ಮಾಡಿದ್ರೂ ಕ್ರಮ ತೆಗೆದುಕೊಳ್ಳಿ. ಹಿಂದಿನ ಲೂಟಿಕೋರರು ನನ್ನ ಕಾರ್ಯದರ್ಶಿ ಬಗ್ಗೆ ಸುತ್ತಿ ಬಳಸಿ ತರ್ತಿದ್ದಾರೆ. ಆದ್ರೆ ಆತ ಬೆಂಗಳೂರಿನಿಂದ ಬಂದು ಹಾಲಿಗೆ ನೀರು ಹಾಕಬೇಕು. ನಮ್ಮ ಹುಡುಗ ಎಂದು ಕೈ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

Last Updated : Jun 17, 2021, 9:21 PM IST

ABOUT THE AUTHOR

...view details