ಮಂಗಳೂರು:ನಗರದ ಬೈಕಂಪಾಡಿ ಜಂಕ್ಷನ್ ಹಳೆಯಂಗಡಿ ಪೇಟೆ ಹಾಗೂ ದೇರಳಕಟ್ಟೆಯಲ್ಲಿ ಅಳವಡಿಸಿರುವ ನಾಥೂರಾಮ್ ಗೋಡ್ಸೆ ಮತ್ತು ಸಾವರ್ಕರ್ ಭಾವಚಿತ್ರ ಇರುವ ಬ್ಯಾನರ್ನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೈಕಂಪಾಡಿ ಜಂಕ್ಷನ್ ಮತ್ತು ಹಳೆಯಂಗಡಿಯಲ್ಲಿ ಶುಭಾಶಯ ಕೋರಿ ಬ್ಯಾನರ್ ಅವಳಡಿಸಿದ್ದರು. ಅದರಲ್ಲಿ ನಾಥೂರಾಮ್ ಗೋಡ್ಸೆ ಫೋಟೋ ಅಳವಡಿಸಲಾಗಿತ್ತು. ಅಲ್ಲದೇ ರಾಜಕೀಯವನ್ನು ಹಿಂದುತ್ವಗೊಳಿಸಿ ಹಿಂದೂಗಳನ್ನು ಸೈನಿಕೀಕರಣಗೊಳಿಸಿ ಎಂಬ ಬರಹವನ್ನು ಬರೆಯಲಾಗಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿತ್ತು. ತಕ್ಷಣ ಎಚ್ಚೆತ್ತ ಪೊಲೀಸರು ಬ್ಯಾನರ್ನ್ನು ತೆರವುಗೊಳಿಸಿದ್ದಾರೆ.