ಕರ್ನಾಟಕ

karnataka

ETV Bharat / city

Bantwal.. 'ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್' ಗೌರವಕ್ಕೆ ಪಾತ್ರರಾದ ಗಣಪತಿ ಭಟ್ - ಬಂಟ್ವಾಳ ಗಣಪತಿ ಭಟ್ ಸಾಧನೆ

ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ (Sajipamooda village of Bantwal taluk) ಪ್ರಗತಿಪರ ಕೃಷಿಕ ಗಣಪತಿ ಭಟ್ (Ganapati Bhat) ಅವರು ಕೃಷಿ ಕಾರ್ಮಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಟ್ರೀ ಬೈಕ್ (Tree Bike) ಆವಿಷ್ಕರಿಸಿದ್ದರು. ಈ ಹಿನ್ನೆಲೆ ಇದೀಗ ಗಣಪತಿ ಭಟ್ ಅವರು 'ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್' ಗೌರವಕ್ಕೆ ಪಾತ್ರರಾಗಿದ್ದಾರೆ.

Ganapati Bhat
Ganapati Bhat

By

Published : Nov 15, 2021, 12:29 PM IST

ಬಂಟ್ವಾಳ : ತಾಲೂಕಿನ ಸಜಿಪಮೂಡ ಗ್ರಾಮದ (Sajipamooda village of Bantwal taluk) ಕೋಮಾಲಿಯ ಪ್ರಗತಿಪರ ಕೃಷಿಕ ಗಣಪತಿ ಭಟ್ (Ganapati Bhat) ಅವರು ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ (Pratishtha World Record) ಗೌರವಕ್ಕೆ ಪಾತ್ರರಾಗಿದ್ದಾರೆ.

ಗಣಪತಿ ಭಟ್ ಅವರು ಕೃಷಿ ಕಾರ್ಮಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 2019 ರಲ್ಲಿ ಇಂಧನ ಚಾಲಿತ ದೇಶೀಯ ಟ್ರೀ ಬೈಕ್ (Tree Bike) ಆವಿಷ್ಕರಿಸಿದ್ದರು. ಸುಧಾರಿತ ವಿಧಾನದ ಈ ಬೈಕ್ ಕಡಿಮೆ ಅವಧಿಯಲ್ಲಿ ರೈತರ ಗಮನ ಸೆಳೆದಿರುವುದಲ್ಲದೇ, ದೇಶ - ವಿದೇಶಗಳಲ್ಲೂ ಜನಪ್ರಿಯತೆ ಪಡೆದು ಬೇಡಿಕೆ ಬಂದಿತ್ತು. ಈ ಹಿನ್ನೆಲೆ ಇದೀಗ ಪ್ರತಿಷ್ಠಾ ಎಂಬ ಸಂಸ್ಥೆ ನೀಡುವ ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ ಗೌರವಕ್ಕೆ ಗಣಪತಿ ಭಟ್ ಭಾಜನರಾಗಿದ್ದಾರೆ.

ಇದನ್ನೂ ಓದಿ:ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ನಾದ ಬ್ರಹ್ಮ

ಅತಿವೇಗದಲ್ಲಿ ಮರವೇರುವ ಹಾಗೂ ಅಡಕೆ ಕೃಷಿಕರಿಗೆ ನೆರವಾಗುವ ಈ ಬೈಕ್ ಅನ್ನು ಗಣಪತಿ ಭಟ್ ಆವಿಷ್ಕರಿಸಿದ ವೇಳೆ ಮಹೀಂದ್ರಾ ಕಂಪನಿ ಮಾಲೀಕರು ಟ್ವಿಟರ್​ನಲ್ಲಿ ಇವರ ಕಾರ್ಯವನ್ನು ಶ್ಲಾಘಿಸಿ, ಮೆಚ್ಚುಗೆಯ ಮಾತುಗಳನ್ನಾಡಿದ್ದರು. ವಿಜಯ ಕರ್ನಾಟಕ ಪತ್ರಿಕೆಯ ಸೂಪರ್ ಸ್ಟಾರ್ ರೈತ ಎಂದು ರಾಜ್ಯಮಟ್ಟದಲ್ಲಿ ಕಳೆದ ವರ್ಷ ಗಣಪತಿ ಭಟ್ ಅವರನ್ನು ಗೌರವಿಸಲಾಗಿತ್ತು.

ಇನ್ನು ಭಟ್ ಪುತ್ರಿ ಸುಪ್ರಿಯಾ, ಅಡಕೆ ಮರವೇರುವ ದೃಶ್ಯಾವಳಿಗಳು 2019ರಲ್ಲಿ ವೈರಲ್ ಆಗಿದ್ದವು. ಇತ್ತೀಚೆಗೆ ಐಪಿಎಲ್​ ಗೆ ಶುಭ ಕೋರುವ ಜಾಹೀರಾತಿನಲ್ಲೂ ಕೂಡ ಭಟ್ ಪಾಲ್ಗೊಂಡು ಗಮನ ಸೆಳೆದಿದ್ದರು.

ABOUT THE AUTHOR

...view details