ಕರ್ನಾಟಕ

karnataka

By

Published : Oct 5, 2019, 11:39 AM IST

ETV Bharat / city

ಜಿ.ಶಂಕರ್ ಟ್ರಸ್ಟ್​​ನಿಂದ 1000ಕ್ಕೂ ಅಧಿಕ ಕ್ಯಾನ್ಸರ್, ಕಿಡ್ನಿ ರೋಗಿಗಳಿಗೆ ಆರ್ಥಿಕ ನೆರವು

ನಾಡೋಜ ಡಾ.ಜಿ.ಶಂಕರ್ ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ‌ 1013 ರೋಗಿಗಳಿಗೆ ಜಿ.ಶಂಕರ್ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಜಿ.ಶಂಕರ್ ಟ್ರಸ್ಟ್​​

ಮಂಗಳೂರು: ಜಿ.ಶಂಕರ್ ಟ್ರಸ್ಟ್ ವತಿಯಿಂದ ನಾಡೋಜ ಡಾ.ಜಿ.ಶಂಕರ್ ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ‌ 1013 ರೋಗಿಗಳಿಗೆ 75 ಲಕ್ಷ ರೂ. ಆರ್ಥಿಕ ನೆರವು ನೀಡಲಾಯಿತು.

ಜಿ.ಶಂಕರ್ ಟ್ರಸ್ಟ್​​ನಿಂದ 1000ಕ್ಕೂ ಅಧಿಕ ಕ್ಯಾನ್ಸರ್, ಕಿಡ್ನಿ ರೋಗಿಗಳಿಗೆ ಆರ್ಥಿಕ ನೆರವು

ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದ ಸರಳ ಸಭೆಯಲ್ಲಿ ಕೆಎಂಸಿ ಆಸ್ಪತ್ರೆ, ವೆನ್ಲಾಕ್ ಜಿಲ್ಲಾಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿಯಲ್ಲಿ ದಾಖಲಾಗಿರುವ 662 ಕ್ಯಾನ್ಸರ್ ಹಾಗೂ 351 ಕಿಡ್ನಿ ರೋಗಿಗಳಿಗೆ ಸಾಂಕೇತಿಕವಾಗಿ ಪರಿಹಾರ ಚೆಕ್ ವಿತರಣೆ ಮಾಡಲಾಯಿತು.

ಈ ಸಂದರ್ಭ ನಾಡೋಜ ಜಿ.ಶಂಕರ್ ಮಾತನಾಡಿ, ನಮ್ಮ ಟ್ಟಸ್ಟ್ ಮೂಲಕ ಕ್ಯಾನ್ಸರ್ ಹಾಗೂ ಕಿಡ್ನಿ ರೋಗಿಗಳಿಗೆ ಸಾಂತ್ವನ ಪೂರಕವಾಗಿ ಸಣ್ಣ ಮೊತ್ತವೊಂದನ್ನು ನೀಡುತ್ತಿದ್ದೇವೆ. ಕ್ಯಾನ್ಸರ್ ಎಂದಾಕ್ಷಣ ಗಾಬರಿಯಾಗುವಂತಿಲ್ಲ. ಇದಕ್ಕೆ ಆತ್ಮಸ್ಥೈರ್ಯ ಅಗತ್ಯ. ಈಗ ಅನೇಕ ಹೊಸ ಹೊಸ ತಂತ್ರಜ್ಞಾನಗಳು ಇರುವುದರಿಂದ ಕ್ಯಾನ್ಸರ್​ ರೋಗಿಗಳು ಭಯಪಡಬೇಕೆಂದಿಲ್ಲ, ಸವಾಲಾಗಿ ಸ್ವೀಕರಿಸಿ ಎಂದು ರೋಗಿಗಳಿಗೆ ಧೈರ್ಯ ತುಂಬಿದರು.

ಈ ಸಂದರ್ಭ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಲೋ, ಆಡಳಿತ ನಿರ್ದೇಶಕ ಫಾ.ರುಡಾಲ್ಫ್‌ ಡೇಸಾ, ವೈದ್ಯಕೀಯ ಅಧೀಕ್ಷಕ ಡಾ.ಉದಯ್ ಕುಮಾರ್, ದಾದಿ ಸಿ.ಜಾನೆಟ್ ಉಪಸ್ಥಿತರಿದ್ದರು.

ABOUT THE AUTHOR

...view details