ಫೆ.10ರಂದು ವಿದ್ಯಾರ್ಥಿಗಳಿಗೆ ಉಚಿತ ಜಂತುಹುಳ ಮಾತ್ರೆ ವಿತರಣೆ: ಡಾ.ರಾಮಕೃಷ್ಣ ರಾವ್ - ಮಧ್ಯಾಹ್ನದ ಊಟವಾದ ಬಳಿಕ ಶಿಕ್ಷಕರೇ ಈ ಮಾತ್ರೆಗಳನ್ನು ನೀಡುವ ವ್ಯವಸ್ಥೆ
ರಾಷ್ಟ್ರೀಯ ಜಂತುಹುಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ಫೆ.10ರಂದು ನೀಡಲಾಗುತ್ತದೆ.

ಫೆ.10ರಂದು ವಿದ್ಯಾರ್ಥಿಗಳಿಗೆ ಉಚಿತ ಜಂತುಹುಳ ಮಾತ್ರೆ ವಿತರಣೆ, ಡಾ.ರಾಮಕೃಷ್ಣ ರಾವ್
ಮಂಗಳೂರು:ರಾಷ್ಟ್ರೀಯ ಜಂತುಹುಳ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ, ಪದವಿ ಪೂರ್ವ ಕಾಲೇಜು, ಐಟಿಐ ವಿದ್ಯಾರ್ಥಿಗಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ಫೆ.10ರಂದು ನೀಡಲಾಗುತ್ತದೆ. ಅಂದು ಮಾತ್ರೆಗಳನ್ನು ಸೇವಿಸದವರಿಗೆ ಫೆ.17ರಂದು ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದರು.
ಫೆ.10ರಂದು ವಿದ್ಯಾರ್ಥಿಗಳಿಗೆ ಉಚಿತ ಜಂತುಹುಳ ಮಾತ್ರೆ ವಿತರಣೆ, ಡಾ.ರಾಮಕೃಷ್ಣ ರಾವ್
ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಊಟವಾದ ಬಳಿಕ ಮಾತ್ರೆಗಳನ್ನು ಚೀಪುವುದರ ಮೂಲಕ ಸೇವನೆ ಮಾಡಬೇಕು ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ ಒಟ್ಟು 5,29,160 ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ಶಾಲೆಗಳಿಗೆ ಸರಬರಾಜು ಮಾಡಲಾಗುವುದು. ಮಧ್ಯಾಹ್ನದ ಊಟವಾದ ಬಳಿಕ ಶಿಕ್ಷಕರೇ ಈ ಮಾತ್ರೆಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ರಾಮಕೃಷ್ಣ ರಾವ್ ಹೇಳಿದರು.
TAGGED:
ಚೀಪುವುದರ ಮೂಲಕ ಸೇವನೆ ಮಾಡಬೇಕು