ಕರ್ನಾಟಕ

karnataka

ETV Bharat / city

ಉಕ್ರೇನ್: ಮಂಗಳೂರಿಗೆ ನಾಲ್ವರು ವಿದ್ಯಾರ್ಥಿಗಳ ಆಗಮನ; ಪೋಷಕರ ನಿಟ್ಟುಸಿರು - ಮಂಗಳೂರಿಗೆ ಬಂದ ವಿದ್ಯಾರ್ಥಿಗಳು

ಯುದ್ಧಪೀಡಿತ ಉಕ್ರೇನ್​ನಿಂದ ಇಂದು ನಾಲ್ವರು ವಿದ್ಯಾರ್ಥಿಗಳು ಮಂಗಳೂರು ತಲುಪಿದರು.

four-students
ಮಂಗಳೂರಿಗೆ ಆಗಮನ

By

Published : Mar 7, 2022, 3:53 PM IST

ಮಂಗಳೂರು:ಯುದ್ಧಪೀಡಿತ ಉಕ್ರೇನ್​ನಿಂದ ಇಂದು ನಾಲ್ವರು ವಿದ್ಯಾರ್ಥಿಗಳು ಮಂಗಳೂರು ತಲುಪಿದ್ದು, ಮಕ್ಕಳನ್ನು ಕಂಡು ಹೆತ್ತವರು ನಿರಾಳರಾದರು.

ಮೂಡಬಿದ್ರೆಯ ಶಾಲ್ವಿನ್ ಪ್ರೀತಿ ಸಾರಂಗ್, ಮೊರ್ಗನ್ ಗೇಟ್​ನ ಸಾದ್ ಅರ್ಷದ್ ಅಹ್ಮದ್, ಪಡೀಲ್​ನ ಕ್ಲಾಟನ್ ಡಿಸೋಜ, ದೇರೆಬೈಲ್​ನ ಅನೈನ್​ ಅನಾ ಮಂಗಳೂರು ತಲುಪಿದವರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಹೆತ್ತವರು ಅವರನ್ನು ಆಲಿಂಗಿಸಿಕೊಂಡು ಆನಂದಭಾಷ್ಪದಿಂದ ಸ್ವಾಗತಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯ 18 ಮಂದಿ ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಇದರಲ್ಲಿ ಹೀನಾ‌ ಫಾತಿಮಾ, ಜೆ. ಅನುಷಾ ಭಟ್, ಎಸ್. ಪ್ರಣವ್ ಕುಮಾರ್, ಅನೈನ್​ ಅನಾ, ಶಾಲ್ವಿನ್ ಪ್ರೀತಿ ಸಾರಂಗ್, ಸಾದ್ ಅರ್ಷದ್ ಅಹ್ಮದ್, ಕ್ಲಾಟನ್ ಡಿಸೋಜ, ಮಂಗಳೂರಿಗೆ ಬಂದಿಳಿದಿದ್ದರೆ, ಪೂಜಾ ಮಲ್ಲಪ್ಪ ಬೆಂಗಳೂರು ಮನೆಗೆ ತಲುಪಿದ್ದಾರೆ.

ಈವರೆಗೆ ಒಟ್ಟು 8 ಮಂದಿ ಹುಟ್ಟೂರು ತಲುಪಿದ್ದು ಇನ್ನೂ 10 ಮಂದಿ ಉಕ್ರೇನ್​ನಲ್ಲಿಯೇ ಸಿಲುಕಿದ್ದಾರೆ.

ಇದನ್ನೂ ಓದಿ:ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಹೆಚ್​ಡಿಕೆ

ABOUT THE AUTHOR

...view details