ಮಂಗಳೂರು:ಕೋವಿಡ್ ಸೋಂಕು ಭೀತಿಯಿಂದ ತಾಪಂ, ಜಿಪಂ ಚುನಾವಣೆ ನಡೆಸಲಾಗದೆ ಆಡಳಿತಾಧಿಕಾರಿಗಳನ್ನು ಇರಿಸಲಾಗಿದೆ. ಚುನಾವಣೆ ನಡೆಸುವ ವಿಚಾರ ನ್ಯಾಯಾಲಯದಲ್ಲಿದ್ದು, ಅದರ ತೀರ್ಮಾನಕ್ಕೆ ಒಳಪಟ್ಟು ಚುನಾವಣಾ ಪ್ರಕ್ರಿಯೆ ಚುರುಕುಗೊಳ್ಳಬೇಕಾಗಿದೆ ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರಕಾರದ ಸಂದರ್ಭದಲ್ಲಿ ಸೂಕ್ತ ತಿದ್ದುಪಡಿ ತಂದು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರವಧಿಯನ್ನು ಸಂಪೂರ್ಣ 5 ವರ್ಷಕ್ಕೆ ವಿಸ್ತರಿಸಲಾಗಿತ್ತು. ಆದರೆ ಇದೀಗ ಆಡಳಿತ ನಡೆಸುತ್ತಿರುವ ಸರಕಾರ ಅದನ್ನು 30 ತಿಂಗಳಿಗೆ ಇಳಿಸಿದೆ. ಆದ್ದರಿಂದ ಪಂಚಾಯ್ತಿ ವ್ಯವಸ್ಥೆಯಲ್ಲಿ ಅಧಿಕಾರಿಗಳ ನೇಮಕಾತಿ ಕೂಡಲೇ ಮಾಡುವಂತೆ ಸರಕಾರವನ್ನು ಒತ್ತಾಯಿಸಿದರು.