ಮಂಗಳೂರು:ಮಾಜಿ ಸಚಿವ ಯು.ಟಿ.ಖಾದರ್ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಧಮ್ ಇದ್ದರೆ ಲಸಿಕೆ ಹಂಚಿಕೆ ಬಗ್ಗೆ ಪ್ರಧಾನಿ ಬಳಿ ಮಾತಾಡಿ: ಬಿಜೆಪಿಗರಿಗೆ ಖಾದರ್ ಟಾಂಗ್ - Mangalore News
ಬಿಜೆಪಿ ನಾಯಕರೇ ನಿಮಗೆ ಧಮ್ ಇದ್ದರೆ ಕೊರೊನಾ ಲಸಿಕೆ ಹಂಚಿಕೆಯಲ್ಲಿ ಅನ್ಯಾಯ ಎಸಗಲಾಗುತ್ತಿರುವ ಬಗ್ಗೆ ಪ್ರಧಾನಿ ಬಳಿ ಮಾತನಾಡಿ, ರಾಜ್ಯಕ್ಕಾದ ಅನ್ಯಾಯ ಸರಿಪಡಿಸಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಸವಾಲು ಹಾಕಿದ್ದಾರೆ..
![ಧಮ್ ಇದ್ದರೆ ಲಸಿಕೆ ಹಂಚಿಕೆ ಬಗ್ಗೆ ಪ್ರಧಾನಿ ಬಳಿ ಮಾತಾಡಿ: ಬಿಜೆಪಿಗರಿಗೆ ಖಾದರ್ ಟಾಂಗ್ Former Minister UT Khader tweet about bjp government](https://etvbharatimages.akamaized.net/etvbharat/prod-images/768-512-9296678-thumbnail-3x2-sow.jpg)
ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೊರೊನಾ ಹೆಸರಿನಲ್ಲಿ ಚಪ್ಪಾಳೆ ಹೊಡೆಸಿ, ದೀಪ ಹಚ್ಚಿಸಿದ ಬಿಜೆಪಿ ನಾಯಕರು ವರ್ಷವಿಡೀ ಮನೆ - ಮನೆಗೆ ಕೊರೊನಾ ತಲುಪಿಸಿ ಲಕ್ಷಾಂತರ ಮನೆ ದೀಪ ಆರಿಸಿದ್ದಾರೆ. ಈಗ ಲಸಿಕೆಯಲ್ಲೂ ರಾಜಕಾರಣ ಮಾಡುತ್ತಿದ್ದೀರಿ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಿದ್ದಾಯ್ತು. ಈಗ ರೋಗದ ಹೆಸರಲ್ಲೂ ಕಳಪೆ ರಾಜಕಾರಣವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ರಾಜ್ಯ ಬಿಹಾರಕ್ಕೆ ಮಾತ್ರ ಲಸಿಕೆ ಏಕೆ?. ರಾಜ್ಯಕ್ಕೆ ಅನುದಾನ, ನೆರೆ ಪರಿಹಾರ, ಜಿಎಸ್ಟಿ ಹಕ್ಕಲ್ಲೂ ಅನ್ಯಾಯವಾಗಿದ್ದು, ಈಗ ಲಸಿಕೆ ಹಂಚಿಕೆಯಲ್ಲೂ ಅನ್ಯಾಯವೇ?. ಬಿಜೆಪಿ ನಾಯಕರೇ ನಿಮಗೆ ಧಮ್ ಇದ್ರೆ ಪ್ರಧಾನಿ ಬಳಿ ಮಾತನಾಡಿ, ರಾಜ್ಯಕ್ಕಾದ ಅನ್ಯಾಯ ಸರಿಪಡಿಸಿ. ಆ ಬಳಿಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಲಿ. ಜನ ಎಲ್ಲವನ್ನೂ ಗಮನಿಸುತ್ತಿದ್ದು, ನಿಮ್ಮ ಜಾಗವನ್ನು ನಿಮಗೆ ತೋರಿಸುತ್ತಾರೆ ಎಂದು ಕಿಡಿಕಾರಿದ್ದಾರೆ.