ಕರ್ನಾಟಕ

karnataka

ETV Bharat / city

ಮಿಥುನ್ ರೈ ಜೋಗಿ ಸಮುದಾಯಕ್ಕೆ ಅವಮಾನ ಮಾಡಿಲ್ಲ: ಮಾಜಿ ಮೇಯರ್ ಹರಿನಾಥ್ ಸ್ಪಷ್ಟನೆ - Mithun Rai statement

ಮಿಥುನ್ ರೈ ಮೇಲೆ ಇಲ್ಲ-ಸಲ್ಲದ ಆರೋಪ ಹೊರಿಸಿದವರು ನನ್ನ ಎದುರು ಬಂದು ಮಾತನಾಡಲಿ ಎಂದು ಸವಾಲೆಸೆದಿರುವ ಮಾಜಿ ಮೇಯರ್​ ಹರಿನಾಥ್, ಮಿಥುನ್ ರೈ ಅವರು ಯಾರನ್ನು ನಿಂದಿಸಿಲ್ಲ. ರಾಜಕೀಯ ಲಾಭಕ್ಕಾಗಿ ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದಿದ್ದಾರೆ.

Former Mayor Harinath clarified about Mithun Rai statement
ಮಾಜಿ ಮೇಯರ್ ಹರಿನಾಥ್

By

Published : Oct 15, 2020, 4:45 PM IST

ಮಂಗಳೂರು:ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವಮಾನ ಮಾಡಿದ್ದಾರೆಂದು ಹೇಳಲಾಗುತ್ತಿದೆ‌. ರಾಜಕೀಯ ಲಾಭಕ್ಕಾಗಿ ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ, ಮಿಥುನ್ ರೈ ಯಾರನ್ನು ನಿಂದಿಸಿಲ್ಲ. ಅಲ್ಲದೆ, ನಮ್ಮ ಸಮಾಜದ ಕುರಿತು ಏನನ್ನೂ ಹೇಳಿಕೆ ನೀಡಿಲ್ಲ ಎಂದು ಮಾಜಿ ಮೇಯರ್ ಹರಿನಾಥ್ ಸ್ಪಷ್ಟನೆ ನೀಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮಿಥುನ್ ರೈ ಮೇಲೆ ಇಲ್ಲ-ಸಲ್ಲದ ಆರೋಪ ಹೊರಿಸಿದವರು ನನ್ನ ಎದುರು ಬಂದು ಮಾತನಾಡಲಿ ಎಂದು ಸವಾಲೆಸೆದರು. ಸಂಸತ್​ನಲ್ಲಿ ಹಿಂದೆ ಯೋಗಿ ಆದಿತ್ಯನಾಥ್ ಅವರು ತಮಗೆ ಉತ್ತರ ಪ್ರದೇಶದಲ್ಲಿ ರಕ್ಷಣೆ ಇಲ್ಲ ಎಂದು ಎರಡು ದಿನಗಳ ಕಾಲ ಕೂಗಿದ್ದರು. ‌ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂದು ಅವರಿಗೆ ಭದ್ರತೆ ನೀಡಿತ್ತು. ಆದರೆ, ಇಂದು ನಮ್ಮ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಯೋಗಿ ಆದಿತ್ಯನಾಥ್ ಅವರನ್ನು ಅವಮಾನ ಮಾಡಿದ್ದಾರೆಂದು ಹೇಳಿ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.‌ ಕದ್ರಿ ಜೋಗಿ ಮಠದ ಹಿಂದಿನ ಗುರುಗಳಾದ ಸೋಮನಾಥ್ ಯೋಗಿ ಅವರು ಇಂದಿರಾಗಾಂಧಿ ಕಾಲದಲ್ಲಿ ಎಐಸಿಸಿ ಸಮಿತಿಯ ಸದಸ್ಯರಾಗಿದ್ದರು.‌ ನಮ್ಮ ಜೋಗಿ ಗುರುಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಹಾಗಾಗಿ ಮಿಥುನ್ ರೈ ಅವರು ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿಲ್ಲ. ಅಲ್ಲದೆ ನಮ್ಮ ಸಮಾಜದ ಕುರಿತು ಏನನ್ನೂ ಹೇಳಿಕೆ ನೀಡಿಲ್ಲ ಎಂದು ಹರಿನಾಥ್ ಹೇಳಿದರು.

ಮಾಜಿ ಮೇಯರ್ ಹರಿನಾಥ್

ಕದ್ರಿಯಲ್ಲಿರುವ ಎಲ್ಲಾ ಪ್ರದೇಶಗಳು ಹಿಂದೆ ಜೋಗಿ ಮಠದ ಆಸ್ತಿಯಾಗಿತ್ತು. ಬಳಿಕ‌ ಆ ಪ್ರದೇಶಗಳನ್ನು ಸಣ್ಣ ಮೊತ್ತಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿತು. ಈ ಹಿನ್ನೆಲೆ ಸರ್ಕ್ಯೂಟ್ ಹೌಸ್ ಬಳಿಯಿರುವ ವೃತ್ತಕ್ಕೆ ಕದ್ರಿಯಲ್ಲಿಯೇ ಜೀವಂತ ಸಮಾಧಿಯಾಗಿರುವ ಜ್ವಾಲಾನಾಥರ ಹೆಸರು ಇಡಬೇಕೆಂದು ಮಂಗಳೂರು ಮನಪಾ ಕೌನ್ಸಿಲ್​​ನಲ್ಲಿ ಒತ್ತಾಯ ಮಾಡಿದ್ದೆವು. ಆ ವೃತ್ತದಲ್ಲಿದ್ದ ಜ್ವಾಲಾನಾಥ ವೃತ್ತ ಎಂಬ ಬೋರ್ಡ್​ಅನ್ನು ಬಿಸಾಡಿದ್ದರು. ಅಲ್ಲದೆ, ಕೌನ್ಸಿಲ್​​ನಲ್ಲಿಯೂ ದೊಡ್ಡ ಗದ್ದಲ ಎಬ್ಬಿಸಿದ್ದರು. ಆಗ ಇವರಿಗೆ ಜೋಗಿ ಮಠದ ಹಾಗೂ ಜೋಗಿ ಸ್ವಾಮಿಗಳ ಬಗ್ಗೆ ಯಾವ ಭಾವನೆ ಇರಲಿಲ್ಲವೇ ಎಂದು ಹರಿನಾಥ್ ಪ್ರಶ್ನಿಸಿದರು.

ABOUT THE AUTHOR

...view details