ಮಂಗಳೂರು:ಮಂಗಳೂರು ಯೂನಿವರ್ಸಿಟಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಕರ್ನಲ್ ಎನ್. ಶರತ್ ಭಂಡಾರಿ ಆಯ್ಕೆಯಾಗಿದ್ದಾರೆ.
ಮಂಗಳೂರು ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಮೊಯ್ಲಿ ಆಯ್ಕೆ - ಮಂಗಳೂರು ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ವೀರಪ್ಪ ಮೊಯ್ಲಿ ಆಯ್ಕೆ
ಮಂಗಳೂರು ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ವೀರಪ್ಪ ಮೊಯ್ಲಿ, ಅಧ್ಯಕ್ಷರಾಗಿ ಕರ್ನಲ್ ಎನ್. ಶರತ್ ಭಂಡಾರಿ ಆಯ್ಕೆಯಾಗಿದ್ದಾರೆ.
![ಮಂಗಳೂರು ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಮೊಯ್ಲಿ ಆಯ್ಕೆ Mangalore](https://etvbharatimages.akamaized.net/etvbharat/prod-images/768-512-13181897-thumbnail-3x2-net.jpg)
ವೀರಪ್ಪ ಮೊಯ್ಲಿ
ಇಂದು ನಡೆದ ಮಂಗಳೂರು ಯೂನಿವರ್ಸಿಟಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಚುನಾವಣೆ ಪ್ರಕ್ರಿಯೆ ನಡೆದಿದೆ. ಈ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆಯಲ್ಲಿ 2021-22 ಮತ್ತು 2022-23 ನೇ ಸಾಲಿಗೆ ಈ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರು ಯೂನಿವರ್ಸಿಟಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ರಾಮದಾಸ್ ಗೌಡ ಎಸ್., ಲೋಹಿದಾಸ್ ಆರ್, ಕಾರ್ಯದರ್ಶಿಯಾಗಿ ಯು.ಮೋಹನ್ ರಾವ್, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ್ ಶೆಟ್ಟಿ ಜೆ. ಕೋಶಾಧಿಕಾರಿಯಾಗಿ ಡಿ.ಶ್ರೀನಿವಾಸ್ ನಾಯ್ಕ್ ಆಯ್ಕೆಯಾದರು.