ಮಂಗಳೂರು :ನಗರದ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯಲ್ಲಿನ ಪಾದರಕ್ಷೆ ಮಳಿಗೆಯೊಂದರ ಮಾಲೀಕ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಲ್ಲಿ ಪಾದರಕ್ಷೆ ಮಳಿಗೆ ಮಾಲೀಕನಿಂದ ಗ್ರಾಹಕಿಗೆ ಲೈಂಗಿಕ ಕಿರುಕುಳ ಆರೋಪ: ಬಂಧನ - ಗ್ರಾಹಕಿಗೆ ಲೈಂಗಿಕ ಕಿರುಕುಳ
ಅಂಗಡಿಗೆ ಬಂದ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಮಂಗಳೂರು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮಹಿಳೆಗೆ ಹೊಸ ಚಪ್ಪಲಿ ತೋರಿಸುವುದಾಗಿ ಹೇಳಿ ಅಂಗಡಿ ಒಳಗೆ ಕರೆದು ತನ್ನ ಭುಜ ಹಾಗೂ ಎದೆಯ ಭಾಗಕ್ಕೆ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ಪಾದರಕ್ಷೆ ಮಳಿಗೆಯ ಮಾಲೀಕ ಸಂಶುದ್ದೀನ್(42) ಬಂಧಿತ ಆರೋಪಿ. ಕಿನ್ನಿಗೋಳಿಯಲ್ಲಿರುವ ಸಂಶುದ್ದೀನ್ ಪಾದರಕ್ಷೆ ಮಳಿಗೆಗೆ ಗ್ರಾಹಕಿಯೋರ್ವರು ಚಪ್ಪಲಿ ಖರೀದಿಸಲೆಂದು ಹೋಗಿದ್ದರು. ಆಗ ಮಳಿಗೆಯ ಮಾಲಕ ಸಂಶುದ್ದೀನ್ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದಾನೆ. ಆದರೆ ಅವರಿಗೆ ಯಾವ ಪಾದರಕ್ಷೆಯೂ ಇಷ್ಟವಾಗಲಿಲ್ಲ. ನಂತರ ಸಂಶುದ್ದೀನ್ ಮಹಿಳೆಗೆ ಬೇರೆ ಚಪ್ಪಲಿಗಳನ್ನು ತೋರಿಸುವುದಾಗಿ ಹೇಳಿ ಅಂಗಡಿಯ ಒಳಗಿದ್ದ ಇನ್ನೊಂದು ಕಂಪಾರ್ಟ್ ಮೆಂಟ್ಗೆ ಕರೆದೊಯ್ದಿದ್ದ ಎನ್ನಲಾಗ್ತಿದೆ.
ನಂತರ ತನ್ನ ಭುಜ ಹಾಗೂ ಎದೆಯ ಭಾಗಕ್ಕೆ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಗ್ರಾಹಕಿಗೆ ಲೈಂಗಿಕ ಕಿರುಕುಳ