ಮಂಗಳೂರು : ಕೊರೊನಾ ಸೋಂಕು ಹರಡದಂತೆ ತಡೆಯಲು ಜಾರಿಗೆ ತಂದಿರುವ ಲಾಕ್ಡೌನ್ನಿಂದಾಗಿ ಅನ್ನಕ್ಕಾಗಿ ಪರದಾಡುತ್ತಿದ್ದ ಭಿಕ್ಷುಕರು, ನಿರಾಶ್ರಿತರಿಗೆ ಯುವಕರ ತಂಡವೊಂದು ಉಪಹಾರ ವಿತರಿಸುವ ಕಾರ್ಯದಲ್ಲಿ ತೊಡಗಿದೆ. ಬಂಟ್ವಾಳ ತಾಲೂಕಿನ ಪರಂಗಿಪೇಟೆಯ ಮಾರಿಪಳ್ಳ ಅಬುಸಾಲಿ ಸಾಧಿಕ್, ಎಂ ಆಶ್ರಫ್, ಅಬ್ದುಲ್‌ಅಜೀಜ್, ಇಸ್ಮಾಯಿಲ್, ಮೊಹಮ್ಮದ್ ಶರೀಫ್ ಎಂಬ ಯುವಕರು ಈ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವವರು.
ಸಂಕಷ್ಟಕ್ಕೊಳಗಾದ ಭಿಕ್ಷುಕರ, ನಿರಾಶ್ರಿತರ ಹೊಟ್ಟೆ ತುಂಬಿಸುತ್ತಿರುವ ಯುವಕರು.. - ಭಿಕ್ಷುಕರ, ನಿರಾಶ್ರಿತರಿಗೆ ಆಹಾರ ವಿತರಣೆ
ಜನತಾ ಕರ್ಫ್ಯೂ ಮರು ದಿನದಿಂದ ಈವರೆಗೂ ಹೊರರಾಜ್ಯ ಮತ್ತು ರಾಜ್ಯದ ಕಟ್ಟಡ ಮತ್ತು ಕೂಲಿ ಕಾರ್ಮಿಕರು, ಭಿಕ್ಷುಕರು, ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆಹಾರ ವಿತರಣೆ
ಜನತಾ ಕರ್ಫ್ಯೂ ಮರು ದಿನದಿಂದ ಈವರೆಗೂ ಹೊರರಾಜ್ಯ ಮತ್ತು ರಾಜ್ಯದ ಕಟ್ಟಡ ಮತ್ತು ಕೂಲಿ ಕಾರ್ಮಿಕರು, ಭಿಕ್ಷುಕರು, ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಊಟದ ವ್ಯವಸ್ಥೆ ನಂತರ ಟೀ, ಬಿಸ್ಕತ್ತು, ಉಪಹಾರ ನೀಡಲು ಆರಂಭಿಸಿದರು. ಅಷ್ಟೇ ಅಲ್ಲ, ಲಾಕ್ಡೌನ್ನಲ್ಲಿ ಕರ್ತವ್ಯ ನಿರತ ಪೊಲೀಸರಿಗೂ ಉಪಹಾರ ನೀಡುತ್ತಿದ್ದಾರೆ. ದಿನಕ್ಕೆ 300ಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಯುವಕರ ಈ ಸಾಮಾಜಿಕ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.