ಮಂಗಳೂರು: ಜಿಲ್ಲಾಡಳಿತದ ಆದೇಶದಂತೆ ಮಂಗಳೂರಿನಲ್ಲಿ ಈ ಋತುಮಾನದ ಮೀನುಗಾರಿಕೆ ಇಂದು ಆರಂಭವಾಗಿದ್ದು, ಶೇ. 20ರಷ್ಟು ಬೋಟುಗಳು ಮಾತ್ರ ಇಂದು ಕಡಲಿಗಿಳಿದಿವೆ. ಮುಂದಿನ ದಿನಗಳಲ್ಲಿ ಉಳಿದ ಬೋಟುಗಳು ಕಡಲಿಗಿಳಿಯಲಿವೆ.
ಕೊರೊನಾ ಸೋಂಕಿನ ಭೀತಿಯಿಂದ ಮೇ ಅಂತ್ಯಕ್ಕೆ ಕೊನೆಗೊಳ್ಳಬೇಕಿದ್ದ ಕಳೆದ ಋತುಮಾನದ ಮೀನುಗಾರಿಕೆ ಮಾರ್ಚ್ ಕೊನೆಯ ವಾರದಲ್ಲಿಯೇ ಸ್ಥಗಿತಗೊಂಡಿತ್ತು. ಅಲ್ಲದೆ ಪ್ರತೀ ವರ್ಷದಂತೆ ಆಗಸ್ಟ್ 1ರಂದು ಮೀನುಗಾರಿಕೆ ಆರಂಭವಾಗದೆ ಸೆಪ್ಟೆಂಬರ್ 1ರಿಂದ ಆರಂಭವಾಗಿದೆ. ಈ ಮೂಲಕ ಐದು ತಿಂಗಳ ಬಳಿಕ ಮಂಗಳೂರಿನಲ್ಲಿ ಯಾಂತ್ರೀಕೃತ ಬೋಟುಗಳ ಮೀನುಗಾರಿಕೆ ಆರಂಭವಾಗಿದೆ.