ಕರ್ನಾಟಕ

karnataka

ETV Bharat / city

ಮಂಗಳೂರು ಬೋಟ್ ದುರಂತ.. ಅನ್ಸಾರ್ ಮೃತದೇಹಕ್ಕೆ 5ನೇ ದಿನವೂ ಮುಂದುವರೆದ ಕಾರ್ಯಾಚರಣೆ - ಬೋಟ್ ದುರಂತ

ಅನ್ಸಾರ್ ಮೃತ ದೇಹ ಕಳೆದ ಮೂರು ದಿನಗಳ ಹಿಂದೆ ಸಿಕ್ಕಿತ್ತಾದರೂ, ಅದನ್ನು ಮೇಲಕ್ಕೆ ತರುವ ಸಂದರ್ಭದಲ್ಲಿ ಮುಳುಗು ತಜ್ಞರ ಕೈಜಾರಿ ಮತ್ತೆ ಸಮುದ್ರದಾಳ ಸೇರಿತ್ತು. ಆ ಬಳಿಕ ಮತ್ತೆ ಮೃತದೇಹ ಪತ್ತೆಯಾಗಿಲ್ಲ..

ಮಂಗಳೂರು ಬೋಟ್ ದುರಂತ
ಮಂಗಳೂರು ಬೋಟ್ ದುರಂತ

By

Published : Dec 5, 2020, 10:52 AM IST

ಮಂಗಳೂರು: ನಗರದ ಅಳಿವೆ ಬಾಗಿಲಿನಲ್ಲಿ ನಡೆದ ಬೋಟ್ ದುರಂತದಲ್ಲಿ ಸಮುದ್ರದ ಪಾಲಾದ ಅನ್ಸಾರ್ ಎಂಬ ಮೀನುಗಾರನ ಮೃತದೇಹ ನಿನ್ನೆ ಸಿಗದ ಹಿನ್ನೆಲೆ 5ನೇ ದಿನವಾದ ಇಂದೂ ಸಹ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.

ಶ್ರೀರಕ್ಷಾ ಎಂಬ ಬೋಟ್ ರವಿವಾರ ಮೀನುಗಾರಿಕೆಗೆಂದು ತೆರಳಿದ್ದು, ಮೀನುಗಳನ್ನು ತುಂಬಿಕೊಂಡು ಮರಳಿ ಬರುವಾಗ ಅಳಿವೆ ಬಾಗಿಲಿನಲ್ಲಿ ಬೋಟ್​ ದುರಂತಕ್ಕೀಡಾಗಿದೆ. ಪರಿಣಾಮ ಬೋಟ್​ನಲ್ಲಿದ್ದ 25 ಮಂದಿಯಲ್ಲಿ 19 ಮಂದಿ ದಡ ಸೇರಿದ್ದರು‌. ಆರು ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು‌. ಈ ಪೈಕಿ ಐವರ ಮೃತದೇಹ ಈಗಾಗಲೇ ಪತ್ತೆಯಾಗಿವೆ.

ಅನ್ಸಾರ್ ಮೃತ ದೇಹ ಕಳೆದ ಮೂರು ದಿನಗಳ ಹಿಂದೆ ಸಿಕ್ಕಿತ್ತಾದರೂ, ಅದನ್ನು ಮೇಲಕ್ಕೆ ತರುವ ಸಂದರ್ಭದಲ್ಲಿ ಮುಳುಗು ತಜ್ಞರ ಕೈಜಾರಿ ಮತ್ತೆ ಸಮುದ್ರದಾಳ ಸೇರಿತ್ತು. ಆ ಬಳಿಕ ಮತ್ತೆ ಮೃತದೇಹ ಪತ್ತೆಯಾಗಿಲ್ಲ. ಈ ಹಿನ್ನೆಲೆ ಜಿಲ್ಲಾಡಳಿತದ ನೇತೃತ್ವದಲ್ಲಿ ಕೋಸ್ಟ್ ಗಾರ್ಡ್, ಮುಳುಗು ತಜ್ಞರು, ಮೀನುಗಾರರು ಶೋಧ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಬೋಟ್ ದುರಂತ: ನಾಲ್ಕನೇ ದಿನವೂ ಸಿಗದ ಮೀನುಗಾರ ಅನ್ವರ್​ ಮೃತದೇಹ

ABOUT THE AUTHOR

...view details