ಕರ್ನಾಟಕ

karnataka

ETV Bharat / city

ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ನವಮಿ ಉತ್ಸವ ನಡೆಸಲು ಮೊದಲ ಹಂತದ ವೇದಿಕೆ ಸಜ್ಜು: ಪೇಜಾವರ ಶ್ರೀ - ಅಯೋಧ್ಯೆ ರಾಮನವಮಿ ಉತ್ಸವ

ಮುಂದಿನ ರಾಮ ನವಮಿಯ ಸಂದರ್ಭದಲ್ಲಿ ನವರಾತ್ರಿ ಉತ್ಸವವನ್ನು ಶ್ರೀರಾಮ ಜನ್ಮಭೂಮಿಯಲ್ಲಿಯೇ ಆಚರಿಸಬೇಕೆಂದು ನಾವು ಆಶಯವನ್ನು ವ್ಯಕ್ತಪಡಿಸಿದ್ದೇವೆ. ಈ ಬಗ್ಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡಿದ್ದು, ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

first-stage-ready-to-celebrate-ramanavami-in-ayodhya
ಪೇಜಾವರ ಶ್ರೀ

By

Published : Feb 21, 2021, 9:08 PM IST

ಮಂಗಳೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಮುಂದಿನ ರಾಮ ನವಮಿ ಉತ್ಸವ ನಡೆಸಲು ಮೊದಲ ಹಂತದ ವೇದಿಕೆ ಸಜ್ಜಾಗಿದೆ ಎಂದು ಶ್ರೀ ರಾಮಮಂದಿರ ನಿರ್ಮಾಣ ಟ್ರಸ್ಟಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಜೋಗಿ ಮಠಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲು ಬಂದಿದ್ದ ಶ್ರೀಗಳು, ಮುಂದಿನ ರಾಮ ನವಮಿಯ ಸಂದರ್ಭದಲ್ಲಿ ನವರಾತ್ರಿ ಉತ್ಸವವನ್ನು ಶ್ರೀರಾಮ ಜನ್ಮಭೂಮಿಯಲ್ಲಿಯೇ ಆಚರಿಸಬೇಕೆಂದು ನಾವು ಆಶಯವನ್ನು ವ್ಯಕ್ತಪಡಿಸಿದ್ದೇವೆ. ಈ ಬಗ್ಗೆ ಟ್ರಸ್ಟಿಗಳ ಜೊತೆ ಮಾತನಾಡಲಾಗಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮಾತನಾಡಬೇಕೆಂದು ನಾವಿಂದು ಮಂಗಳೂರಿಗೆ ಆಗಮಿಸಿದ್ದೇವೆ. ಈ ಬಗ್ಗೆ ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡಿದ್ದು, ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ನವಮಿ ಉತ್ಸವ ನಡೆಸಲು ಮೊದಲ ಹಂತದ ವೇದಿಕೆ ಸಜ್ಜು

ಪಿಎಫ್​ಐ ಅವರ ಸಮುದಾಯಕ್ಕೆ ಹೇಳಿದೆ

ಪಿಎಫ್ಐ ಸಂಘಟನೆಯು ರಾಮ ಮಂದಿರ ನಿರ್ಮಾಣಕ್ಕೆ ಯಾರೂ ದೇಣಿಗೆ ನೀಡಬಾರದೆಂದು ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಇದು ಅವರು ಅವರ ಸಮಾಜಕ್ಕೆ ಕೇಳಿಕೊಂಡಿದ್ದಾರೆ. ಅವರ ಆಂತರಿಕ ವಿಚಾರದ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ ಎಂದರು.

ಹತ್ತು ರಾಮ ಮಂದಿರ ಕಟ್ಟಿದರೂ ನಮಗೆ ಸಂತೋಷ

ಸಿದ್ದರಾಮಯ್ಯನವರು ರಾಮ ಮಂದಿರ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅನ್ನುವುದಕ್ಕೆ ಏನು ಬೇಕಾದರೂ ಅನ್ನಬಹುದು. ಎಲ್ಲವೂ ಪಾರದರ್ಶಕವಾಗಿ, ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಅಂತಹ ಯಾವ ಗೊಂದಲಕ್ಕೆ ಅವಕಾಶ ಇಲ್ಲ. ಅವರು ಒಂದಲ್ಲ ಹತ್ತು ರಾಮ ಮಂದಿರ ಕಟ್ಟಿದರೂ ನಮಗೆ ಸಂತೋಷ ಎಂದು ಹೇಳಿದರು.

ABOUT THE AUTHOR

...view details