ಮಂಗಳೂರು: ನಗರದ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್ನಲ್ಲಿ ಗಾಜಿನ ಬಾಗಿಲು ಲಾಕ್ ಆಗಿ ಸಿಲುಕಿಕೊಂಡಿದ್ದ ಮಗುವನ್ನು ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಿನ್ನೆ(ಬುಧವಾರ) ನಡೆದಿದೆ.
ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ದಂಪತಿ 1 ವರ್ಷದ ಮಗುವನ್ನು ಅಜ್ಜಿಯ ಜೊತೆಗೆ ಬಿಟ್ಟು ಹೊರಗಡೆ ಹೋಗಿದ್ದರು. ಅಜ್ಜಿ ಮನೆಯ ಹೊರಭಾಗಕ್ಕೆ ತೆರಳಿ ಸ್ವಚ್ಛತೆ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ, ಒಳಗಿನಿಂದ ಮಗು ಹೊರಗೆ ಬಾರದಿರಲಿ ಎಂದು ಗಾಜಿನ ಬಾಗಿಲನ್ನು ಸರಿಸಿದ್ದರು. ಆದರೆ, ಆ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿತ್ತು.