ಕರ್ನಾಟಕ

karnataka

ETV Bharat / city

ಮಂಗಳೂರು: ತೇಜಸ್ವಿನಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ...! - mangalore latest news

ಮಂಗಳೂರು ನಗರದ ಕದ್ರಿ ಬಳಿಯ ತೇಜಸ್ವಿನಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೂಡಲೇ ಸ್ಥಳಕ್ಕಾಮಿಸಿದ ಪಾಂಡೇಶ್ವರ ಹಾಗೂ ಕದ್ರಿಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Fire at Tejaswini Hospital in mangalore
ಮಂಗಳೂರು: ತೇಜಸ್ವಿನಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ...!

By

Published : Jul 5, 2020, 5:27 PM IST

ಮಂಗಳೂರು:ನಗರದ ಕದ್ರಿ ಬಳಿಯ ತೇಜಸ್ವಿನಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.

ಮಂಗಳೂರು: ತೇಜಸ್ವಿನಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ...!

ಆಸ್ಪತ್ರೆಯ ಎಂಆರ್​ಐ ಸ್ಕ್ಯಾನಿಂಗ್ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಹತ್ತಿರದ ಬ್ಯಾಟರಿಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ‌. ಪರಿಣಾಮ ಕಟ್ಟಡದ ಕೆಳ ಅಂತಸ್ತಿನ ಮಳಿಗೆ ತುಂಬಾ ಹೊಗೆ ಆವರಿಸಿದ್ದು, ಕೆಲಕಾಲ ಸ್ಥಳದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು.

ಕೂಡಲೇ ಸ್ಥಳಕ್ಕಾಮಿಸಿದ ಪಾಂಡೇಶ್ವರ ಹಾಗೂ ಕದ್ರಿಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯ ಮೇಲಿನ ಅಂತಸ್ತಿನಲ್ಲಿದ್ದ ಸುಮಾರು 20 ರೋಗಿಗಳನ್ನ ಅದೇ ಆಸ್ಪತ್ರೆಯ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ABOUT THE AUTHOR

...view details