ಕರ್ನಾಟಕ

karnataka

ETV Bharat / city

ಕೇಂದ್ರ ಸರ್ಕಾರದ ಮುಂದೆ Areca nut ನಿಷೇಧ ಪ್ರಸ್ತಾವನೆ: ಅಡಿಕೆ ಬೆಳೆಗಾರರು ಹೇಳುವುದೇನು? - ಅಡಿಕೆ ನಿಷೇಧ ಪ್ರಸ್ತಾವನೆ

ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ (Nishikant Dubey) ಅಡಿಕೆ((Areca nut)ಯಲ್ಲಿ ವಿಷಕಾರಿ ಅಂಶವಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದು ಅಡಿಕೆ ಬೆಳೆಗಾರರನ್ನು ಗೊಂದಲಕ್ಕೀಡು ಮಾಡಿದೆ.

Arecanut Farmers
ಸಾಂದರ್ಭಿಕ ಚಿತ್ರ

By

Published : Nov 13, 2021, 3:13 PM IST

ಪುತ್ತೂರು(ದಕ್ಷಿಣ ಕನ್ನಡ):ಅಡಿಕೆ ನಿಷೇಧವೆಂಬ ತೂಗುಗತ್ತಿ ಮತ್ತೆ ಅಡಿಕೆ ಬೆಳೆಗಾರರನ್ನು ಕಾಡಲಾರಂಭಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಕೆ ನಿಷೇಧವೆಂಬ ಆದೇಶ ಈವರೆಗೂ ಊರ್ಜಿತದಲ್ಲಿರುವ ಜತೆಗೆ ಮತ್ತೆ ಅಡಿಕೆ (Areca nut) ವಿಷಕಾರಿ ಎನ್ನುವ ವಿಚಾರ ಚರ್ಚೆಯಲ್ಲಿದೆ.

ಕೇಂದ್ರ ಸರ್ಕಾರದ ಮುಂದೆ ಅಡಿಕೆ ನಿಷೇಧ ಪ್ರಸ್ತಾವನೆ: ಹೀಗಿದೆ ಬೆಳೆಗಾರರ ಪ್ರತಿಕ್ರಿಯೆ..

ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ (Nishikant Dubey) ಅಡಿಕೆ ವಿಷಕಾರಿಯಾಗಿದ್ದು, ಅದನ್ನು ನಿಷೇಧ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಕರಾವಳಿ ಕರ್ನಾಟಕ ಹಾಗು ಶಿವಮೊಗ್ಗ ಜಿಲ್ಲೆಯ ಕೃಷಿಕರ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ನಿಷೇಧದ ತೂಗುಗತ್ತಿಯಿಂದ ತಪ್ಪಿಸಿಕೊಂಡಿಲ್ಲ. ಕರ್ನಾಟಕದಲ್ಲಿ ಅದರಲ್ಲಿಯೂ ದಕ್ಷಿಣಕನ್ನಡ ಹಾಗು ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಲಕ್ಷಾಂತರ ಕುಟುಂಬಗಳು ಇದೇ ಬೆಳೆಯನ್ನು ನಂಬಿ ತಮ್ಮ ಜೀವನ ಸಾಗಿಸುತ್ತಿವೆ.

ತಂಬಾಕು ರಹಿತ ಅಡಿಕೆಯ ಬಳಕೆಗೆ ಅವಕಾಶ:

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ(UPA) ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2012ರಲ್ಲಿ ಪಾರ್ಲಿಮೆಂಟ್​​​ನಲ್ಲಿ ಅಡಿಕೆ ನಿಷೇಧಿಸುವ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇಲಾಖೆಯ ವರದಿ ಪ್ರಕಾರ ಅಡಿಕೆಯಲ್ಲಿ ತಯಾರಿಸುವಂತಹ ತಂಬಾಕು ಪದಾರ್ಥಗಳನ್ನು ತಿನ್ನುವುದರಿಂದ ಓರಲ್ ಕ್ಯಾನ್ಸರ್ ಆಗುತ್ತಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿತ್ತು. ಇದೇ ಕಾರಣಕ್ಕಾಗಿ ದೇಶಾದ್ಯಂತ ಅಡಿಕೆ ನಿಷೇಧಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆ ತಂಬಾಕು ರಹಿತ ಅಡಿಕೆಯ ಬಳಕೆಗೆ ಅವಕಾಶ ನೀಡಲಾಗಿತ್ತು.

ಬೆಳೆಗಾರರನ್ನು ಗೊಂದಲಕ್ಕೀಡು ಮಾಡಿದ ದುಬೆ ಪತ್ರ:

ಆದರೆ ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್​​ಡಿಎ(NDA) ಸರ್ಕಾರ ಕೂಡಾ ಯುಪಿಎ(UPA) ಸರ್ಕಾರದ ಪ್ರಸ್ತಾವನೆಯನ್ನೇ ಮತ್ತೆ ಲೋಕಸಭೆಯ ಮುಂದಿಟ್ಟಿದೆ. ಈ ಪ್ರಕ್ರಿಯೆಗಳು ಚಾಲ್ತಿರುವಾಗಲೇ ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ (Nishikant Dubey) ಅಡಿಕೆಯಲ್ಲಿ ವಿಷಕಾರಿ ಅಂಶವಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದು ಅಡಿಕೆ ಬೆಳೆಗಾರರನ್ನು ಗೊಂದಲಕ್ಕೀಡು ಮಾಡಿದೆ.

ಅಡಿಕೆ ಹಾನಿಕಾರಕವಲ್ಲ:

ಪ್ರತಿ ಬಾರಿ ಅಡಿಕೆ ನಿಷೇಧ ಎನ್ನುವ ಗುಮ್ಮ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ. ಇದಕ್ಕೆ ಶಾಶ್ವತ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸುತ್ತಿದೆ. ಅಡಿಕೆಯನ್ನು ಪುರಾತನ ಕಾಲದಿಂದಲೂ ಧಾರ್ಮಿಕ ಸೇರಿದಂತೆ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿದ್ದು, ಅಡಿಕೆ ಹಾನಿಕಾರಕವಲ್ಲ. ಅಡಿಕೆಯಿಂದ ತಯಾರು ಮಾಡುವ ಗುಟ್ಕಾದಿಂದ ಹಾನಿಕಾರಕವಾಗುತ್ತಿದೆಯೇ ಎನ್ನುವ ವಿಚಾರವನ್ನು ವೈಜ್ಞಾನಿಕವಾಗಿ ತಿಳಿಯಪಡಿಸಬೇಕಿದೆ ಎನ್ನುವುದು ಅಡಿಕೆ ಬೆಳೆಗಾರರ ಸಂಘದ ಒತ್ತಾಸೆಯಾಆಗಿದೆ.

ಅಡಿಕೆ ಬೆಳೆಯಿಂದ ಹಿಡಿದು, ಅಡಿಕೆ ಸಂಸ್ಕರಿಸುವ ಹಂತದಲ್ಲಿಯೂ ರಾಸಾಯನಿಕಗಳನ್ನು ಬಳಸುತ್ತಿರುವುದು ಇದೀಗ ತೆರೆದಿಟ್ಟ ಪುಸ್ತಕದಂತೆ ಸತ್ಯ ಎನ್ನುವ ವಿಚಾರ ಹರಿದಾಡುತ್ತಿದೆ. ಅಡಿಕೆ ಮರದಲ್ಲಿ ಹಿಂಗಾರ ಉದುರಿ ಬೀಳದಂತೆ ಮೈಲುತುತ್ತ (Copper sulfate) ಸೇರಿದಂತೆ ವಿವಿಧ ರೀತಿಯ ರಾಸಾಯನಿಕಗಳನ್ನು ಅಡಿಕೆಗೆ ಬೆಳೆಯುವ ಮೊದಲೇ ಬಿಡಲಾಗುತ್ತದೆ. ಅಡಿಕೆಯನ್ನು ಮಾರಾಟ ಮಾಡುವ ಹಂತದಲ್ಲಿ ಅಡಿಕೆಯನ್ನು ಸಂಸ್ಕರಿಸುವ ಗಾರ್ಬಲ್​​​ಗಳಲ್ಲಿ ಅಡಿಕೆಯನ್ನು ಪಾಲಿಶ್ ಮಾಡುವುದಕ್ಕಾಗಿ ಸಲ್ಫರ್ ಗಳನ್ನು ಬಳಸಲಾಗುತ್ತದೆ. ಅಲ್ಲದೇ ಅಡಿಕೆಯನ್ನು ಶೇಖರಿಸಿಡುವ ಸಂದರ್ಭದಲ್ಲಿ ಹುಳುಗಳ ಕಾಟ ತಡೆಯಲು ಇನ್ನೊಂದು ರೀತಿಯ ರಾಸಾಯನಿಕವನ್ನು(Chemical) ಬಳಸಲಾಗುತ್ತಿದೆ. ಆ ಬಳಿಕ ಅಡಿಕೆಯನ್ನು ಗುಟ್ಕಾಆಗಿ ಪರಿವರ್ತಿಸುವ ಸಂದರ್ಭದಲ್ಲಿ ಅಡಿಕೆಗೆ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ.

ವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆ ನಡೆಸಿ:

ತಮ್ಮ ತೋಟದಲ್ಲಿ ಬೆಳೆಯುವ ಕೆಲವು ಅಡಿಕೆ ಮರಗಳಿಗೆ ಮೈಲುತುತ್ತ ಸೇರಿದಂತೆ ಯಾವುದೇ ರಾಸಾಯನಿಕ ಬಳಸದೆ ಅಡಿಕೆ ಹಾಗು ರಾಸಾಯನಿಕ ಬಳಸಿದ ಅಡಿಕೆ ಗಿಡಗಳಿಂದ ಅಡಿಕೆ ಸಂಗ್ರಹಿಸಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆ ನಡೆಸಿದಲ್ಲಿ, ಯಾವುದು ಹಾನಿಕಾರಕ ಎನ್ನುವುದು ತಿಳಿದು ಬರಲಿದೆ ಎನ್ನುತ್ತಾರೆ ಅಡಿಕೆ ಬೆಳೆಗಾರರ ಸಂಘದ ಕಾರ್ಯಕರ್ತ ಲೋಕೇಶ್ ಅಲ್ಮುಡ.

ಅಡಿಕೆ ಕ್ಯಾನ್ಸರ್ ಕಾರಕವಾಗಲು ಅಡಿಕೆ ಸಂಗ್ರಹಕಾರರೇ ಕಾರಣ ಎನ್ನುವ ಆರೋಪವೂ ಇದೆ. ಹೆಚ್ಚಿನ ಬೆಲೆಯ ಆಸೆಗಾಗಿ ರಾಸಾಯನಿಕಗಳನ್ನು ಬಳಸಿ ಅಡಿಕೆಯನ್ನ ದಾಸ್ತಾನು ಇಟ್ಟ ಪರಿಣಾಮವೇ ಅಡಿಕೆ ವಿಷಯುಕ್ತವಾಗಲು ಕಾರಣ ಎನ್ನಲಾಗ್ತಿದೆ. ಸರ್ಕಾರ ಇಂತಹ ವ್ಯವಸ್ಥೆಗಳ ವಿರುದ್ಧ ಕ್ರಮ ಕೈಗೊಂಡಲ್ಲಿ ಅಡಿಕೆ ವಿಷಯುಕ್ತವಾಗುವುದನ್ನು ತಡೆಯಲು ಸಾಧ್ಯವಿದೆ.

ಇದನ್ನೂ ಓದಿ:ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಈ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ: ಕ್ಯಾಂಪ್ಕೊ

ABOUT THE AUTHOR

...view details