ಕರ್ನಾಟಕ

karnataka

ETV Bharat / city

ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ಹಕ್ಕೊತ್ತಾಯ ಸಭೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿತು.

Farmers protest against central and state government
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ

By

Published : Dec 17, 2019, 5:34 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಈ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ‌ ಬಿಜೆಪಿ ಬರುತಿತ್ತು. ಒಂದು ವೇಳೆ ಬಿಜೆಪಿ ಆಡಳಿತಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುತಿತ್ತು. ಹೀಗಾಗಿ ಸಮನ್ವಯದ ಕೊರತೆ ಹೆಚ್ಚಾಗಿ ರೈತರ ಬೇಡಿಕೆಗಳು ಮೂಲೆಗುಂಪಾಗುತ್ತಿದ್ದವು. ಈಗ ಎರಡೂ ಕಡೆ ಒಂದೇ ಸರ್ಕಾರವಿದ್ದರೂ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಹಕಾರಿ ಬ್ಯಾಂಕ್​​ಗಳ ಲಕ್ಷ ರೂಪಾಯಿ ಬೆಳೆ ಸಾಲಮನ್ನಾ ಮಾಡಿತ್ತು. ಈ ಜಿಲ್ಲೆಯ 67 ಸಾವಿರ ರೈತರು ಅದರಡಿಗೆ ಬರುತ್ತಾರೆ. ಒಟ್ಟು ₹ 526 ಕೋಟಿ ರೈತರ ಖಾತೆಗೆ ಹಣ ಬರಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ₹ 265 ಕೋಟಿ ಮಾತ್ರ ಬಿಡುಗಡೆಗೊಂಡಿದೆ. ವಾಣಿಜ್ಯ ಬ್ಯಾಂಕ್​​​ಗಳಲ್ಲಿ ₹ 2 ಲಕ್ಷ ಸಾಲಮನ್ನಾ ಘೋಷಣೆ ಆಗಿತ್ತು. ಅದು ₹18 ಕೋಟಿ ಮಾತ್ರ ಬಂದಿದೆ. ಅಷ್ಟೇ ಅಲ್ಲದೆ, ಇನ್ನೂ ಬಾಕಿ ಹಣದ ಪಟ್ಟಿಯೇ ತಯಾರಾಗಿಲ್ಲ. ಈ ಕೂಡಲೇ ಬಾಳಿ ಉಳಿಸಿಕೊಂಡಿರುವ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ

ನೆರೆಯಿಂದಾಗಿ ರಾಜ್ಯದಲ್ಲಿ ₹ 4 ಲಕ್ಷ ಕೋಟಿಯಷ್ಟು ಬೆಳೆ, ಮನೆ ಹಾನಿಯಾಗಿದೆ. ಆದರೆ ರಾಜ್ಯ ಸರ್ಕಾರ ₹ 40 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಕೇಂದ್ರಕ್ಕೆ ವರದಿ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಕೇಂದ್ರ ಭಿಕ್ಷೆಯಾಗಿ ₹1,300 ಕೋಟಿ ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಬಂಟ್ವಾಳದಿಂದ ಬೆಂಗಳೂರಿನವರೆಗೆ ಸಾವಿರಾರು ರೈತರು ವಾಹನ ಜಾಥಾ ನಡೆಸಿದೆವು. ಆ ಬಳಿಕ ಎಚ್ಚರಗೊಂಡ ರಾಜ್ಯ ಸರ್ಕಾರ ₹ 10,000 ಪರಿಹಾರ ಘೋಷಿಸಿತು. ಇದನ್ನು ಪರಿಹಾರ ಎಂದು ಹೇಳುತ್ತಾರಾ ಎಂದವರು ಪ್ರಶ್ನಿಸಿದರು.

ABOUT THE AUTHOR

...view details