ಕರ್ನಾಟಕ

karnataka

ETV Bharat / city

ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ; ಸಾರ್ಥಕತೆ ಮೆರೆದ ಕುಟುಂಬ - Organs donation of Preethi Manoj

ಶ್ರವಣ್ ಕುಮಾರ್ ಎಂಬಾತ ಬಳ್ಳಾಲ್ ಬಾಗ್​ನಲ್ಲಿ ಅಜಾಗರೂಕತೆಯಿಂದ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ದಾಟಿ ಪ್ರೀತಿ ಮನೋಜ್ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಹಾಗು ಇನ್ನಿತರೆ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದ‌. ಪರಿಣಾಮ, ಪ್ರೀತಿ ಮನೋಜ್ ಹಾಗೂ ಮತ್ತೋರ್ವ ಬಾಲಕ ಗಾಯಗೊಂಡಿದ್ದರು‌.

Preethi Manoj
ಪ್ರೀತಿ ಮನೋಜ್

By

Published : Apr 23, 2022, 4:51 PM IST

ಮಂಗಳೂರು: ತನ್ನದಲ್ಲದ ತಪ್ಪಿಗೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಸ್ಥಿತಿಯಲ್ಲಿ ಹೋರಾಟ ಮಾಡುತ್ತಿದ್ದ ಮಹಿಳೆಯ ಮಿದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದರು.


ಮೆದುಳು ನಿಷ್ಕ್ರಿಯಗೊಂಡ ಪ್ರೀತಿ ಮನೋಜ್ ಅವರ ಲಿವರ್ ಅನ್ನು ಬೆಂಗಳೂರಿನ ಆ್ಯಸ್ಟರ್ ಸಿಎಂಐ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. ‌ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲದೆ ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಿರುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಆಸ್ಪತ್ರೆಯ ಜೀವ ಸಾರ್ಥಕತೆಯ ವಿಭಾಗವು ಅಂಗಾಂಗಗಳನ್ನು ರವಾನಿಸುವ ವ್ಯವಸ್ಥೆ ಮಾಡಿದೆ.

ಏ.9ರಂದು ನಡೆದ ಅಪಘಾತದಲ್ಲಿ ಮಹಿಳೆ ಪ್ರೀತಿ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದರು. ಶ್ರವಣ್ ಕುಮಾರ್ ಎಂಬಾತ ಬಳ್ಳಾಲ್ ಬಾಗ್​ನಲ್ಲಿ ಅಜಾಗರೂಕತೆಯಿಂದ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ದಾಟಿ ಪ್ರೀತಿ ಮನೋಜ್ ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸಹಿತ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದ‌. ಪರಿಣಾಮ ಪ್ರೀತಿ ಮನೋಜ್ ಹಾಗೂ ಮತ್ತೋರ್ವ ಬಾಲಕ ಗಾಯಗೊಂಡಿದ್ದರು‌.

ಎ.ಜೆ.ಆಸ್ಪತ್ರೆಗೆ ದಾಖಲಾಗಿದ್ದ ಪ್ರೀತಿ ಮನೋಜ್ ಜೀವನ್ಮರಣದ ಸ್ಥಿತಿಯಲ್ಲಿ 13 ದಿನಗಳ ಹೋರಾಟ ನಡೆಸುತ್ತಿದ್ದರು. ನಿನ್ನೆ ಅವರ ಮಿದುಳು ನಿಷ್ಕ್ರಿಯಗೊಂಡಿದೆ. ಈ ಬಗ್ಗೆ ವೈದ್ಯರು ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದರು. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಇದನ್ನೂ ಓದಿ:ಕಿರುಚಿತ್ರ ನಿರ್ಮಾಪಕ ಗಣೇಶ್ ವೇಮುಲ್ಕರ್ ಅಂಗಾಂಗ ದಾನದಿಂದ 8 ಜನರಿಗೆ ಹೊಸ ಜೀವನ..‌

ABOUT THE AUTHOR

...view details