ಮಂಗಳೂರು:ಹುಲಿ ವೇಷಧಾರಿಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕುಂಪಲದ ವಿದ್ಯಾನಗರದಲ್ಲಿ ನಡೆದಿದೆ. ಗರೋಡಿ ನಿವಾಸಿ ವಸಂತಕುಮಾರ್ (57) ಮೃತ ವ್ಯಕ್ತಿ.
ಕುಂಪಲದಲ್ಲಿ ನಡೆದ ಮೊಸರು ಕುಡಿಕೆ ಉತ್ಸವಕ್ಕಾಗಿ ವಸಂತ್ ಹುಲಿ ವೇಷ ಹಾಕಿದ್ದರು. ಶುಕ್ರವಾರ ರಾತ್ರಿ 2 ಗಂಟೆಗೆ ಟ್ರಕ್‌ನಿಂದ ಇಳಿದು ಸಂಬಂಧಿಕರ ಮನೆಯ ಸಮೀಪದ ಬಾವಿಯ ಕಟ್ಟೆ ಮೇಲೆ ಕುಳಿತುಕೊಂಡಿದ್ದರು. ನಿದ್ದೆಯ ಮಂಪರಿನಲ್ಲಿ ಬಾವಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ನಿದ್ದೆ ಮಂಪರಿನಲ್ಲಿ ಬಾವಿಗೆ ಬಿದ್ದ ಹುಲಿವೇಷಧಾರಿ ಸಾವು - Fall into the well
ಹುಲಿ ವೇಷಧಾರಿ ವಸಂತಕುಮಾರ್ ಎಂಬುವವರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕುಂಪಲದ ವಿದ್ಯಾನಗರದಲ್ಲಿ ನಡೆದಿದೆ.
Fall into the well death Impersonator
ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನು ಮೇಲಕ್ಕೆತ್ತಿದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.