ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಅಥವಾ ಇತರ ದುರುದ್ದೇಶದಿಂದ ತನ್ನ ಹೆಸರನ್ನು ಹಾಗೂ ನಾಡವರ ಸಂಘದ ಲೆಟರ್ ಹೆಡ್ ಅನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಪಸರಿಸಲಾಗುತ್ತಿದೆ ಎಂದು ಬಂಟರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.
ರಾಜಕೀಯ ಲಾಭ ಪಡೆಯಲು ಸುಳ್ಳು ಸುದ್ದಿ ಪಸರಿಸಲಾಗುತ್ತಿದೆ: ಮಾಲಾಡಿ ಅಜಿತ್ ಕುಮಾರ್ ರೈ - undefined
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೆಸರಿನಲ್ಲಿ ಪಕ್ಷವೊಂದರ ಪರವಾಗಿ ಹರಿದಾಡಿದ ಸಂದೇಶ. ಲೋಕಸಭಾ ಚುನಾವಣೆಯ ಹಿನ್ನೆಲೆ ರಾಜಕೀಯ ಲಾಭ ಪಡೆಯಲು ನನ್ನ ಹಾಗೂ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದ ಅಜಿತ್ ಕುಮಾರ್ ರೈ.
ಲೋಕಸಭಾ ಚುನಾವಣೆಯಲ್ಲಿ ಪಕ್ಷವೊಂದನ್ನು ಗೆಲ್ಲಿಸಬೇಕೆಂದು ಅಜಿತ್ ಕುಮಾರ್ ರೈ ಅವರ ಹೆಸರಿನಲ್ಲಿ ಸಂದೇಶವೊಂದು ಇತ್ತೀಚೆಗೆ ವ್ಯಾಟ್ಸ್ಯಾಪ್ನಲ್ಲಿ ಹರಿದಾಡಿತ್ತು. ಈ ಬಗ್ಗೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರ ಹಾಗೂ ವಿರೋಧವಾಗಿ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳುಹಿಸಿಲ್ಲ. ನನ್ನ ಹೆಸರಿನ ಮೂಲಕ ಪಕ್ಷವೊಂದರ ಪರವಾಗಿ ಸಂದೇಶವೊಂದು ಹರಿದಾಡುತ್ತಿದೆ. ಇದರಿಂದ ವೈಯಕ್ತಿಕವಾಗಿ ನನಗೆ ತುಂಬಾ ಹಾನಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾನು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮತ್ತು ರಾಜಕೀಯ ವ್ಯಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಯಾವುದೇ ವ್ಯಕ್ತಿ, ಪಕ್ಷವನ್ನು ಅಥವಾ ಜಾತಿಯನ್ನು ಬೆಂಬಲಿಸಿ ಯಾವುದೇ ಸಂದೇಶಗಳನ್ನು ನೀಡಿಲ್ಲ. ನನ್ನ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಪಸರಿಸುವವರ ವಿರುದ್ಧ ನಾನು ಈಗಾಗಲೇ ಚುನಾವಣಾ ಆಯೋಗ, ಮಂಗಳೂರು ನಗರ ಪೊಲೀಸ್ ಆಯುಕ್ತರು, ಕದ್ರಿ ಪೊಲೀಸ್ ಠಾಣೆ ಮತ್ತು ಸೈಬರ್ ಸೆಲ್ಗಳಿಗೆ ದೂರು ಕೊಟ್ಟಿದ್ದೇನೆ. ಜಾಲತಾಣಗಳಲ್ಲಿ ವೈರಲ್ ಆಗಿರುವುದು ಸುಳ್ಳು ಸುದ್ದಿ. ಯಾರೂ ಖುಢ ಇದನ್ನು ನಂಬಬಾರದೆಂದು ಅಜಿತ್ ಕುಮಾರ್ ರೈ ಮನವಿ ಮಾಡಿದರು.