ಕರ್ನಾಟಕ

karnataka

ETV Bharat / city

ಬಜರಂಗದಳ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಅಪಪ್ರಚಾರ ; ದೂರು ದಾಖಲು - ಮಂಗಳೂರು ಸುದ್ದಿ

ಶರಣ್ ಪಂಪ್​ವೆಲ್ ಅವರ ಮಾನಹಾನಿ ಮಾಡುವ ಉದ್ದೇಶದಿಂದಲೇ ಈ ಅಪಪ್ರಚಾರ ಮಾಡಲಾಗಿದೆ. ನಕಲಿ ಖಾತೆ ಮೂಲಕ ಅಪಪ್ರಚಾರ ನಡೆಸಿ ಮಾನ ಹಾನಿ ಮಾಡುವ ದೊಡ್ಡ ಜಾಲ ಸಕ್ರಿಯವಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ..

Sharan pumpwell
ಶರಣ್ ಪಂಪ್​ವೆಲ್

By

Published : Jan 27, 2021, 3:56 PM IST

ಮಂಗಳೂರು :ಬಜರಂಗದಳ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದು ತಿಂಗಳಿನಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಅಪಪ್ರಚಾರ ವಿರುದ್ಧ ಬಜರಂಗದಳ ಪತ್ರಿಕಾ ಪ್ರಕಟಣೆ

ಈ ದೂರಿನ ಆಧಾರದಲ್ಲಿ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಫೇಸ್​ಬುಕ್​ ಖಾತೆಗಳನ್ನು ತೆರೆದು ಅಪಪ್ರಚಾರ ಮಾಡಲಾಗುತ್ತಿದ್ದು, ಕೆಲಸದ ಆಮಿಷ ನೀಡಿ ಅಮಾಯಕ ಹಿಂದೂ ಯುವತಿಯರನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯುವಕರಿಂದ ಅತ್ಯಾಚಾರ ಮಾಡಿಸಲಾಗುತ್ತಿದೆ ಎಂದು ನಕಲಿ ಖಾತೆಯೊಂದರಲ್ಲಿ ಹಿಂದೂ ಯುವತಿಯ ಸೋಗಿನಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.

ಇದನ್ನೂ ಓದಿ:ಕೊರೊನಾ ಶಮನಕ್ಕೆ ಮೂಡುಬಿದಿರೆ ಸಾವಿರಕಂಬ ಬಸದಿಯಲ್ಲಿ ಲಕ್ಷ ದೀಪೋತ್ಸವ

ಶರಣ್ ಪಂಪ್​ವೆಲ್ ಅವರ ಮಾನಹಾನಿ ಮಾಡುವ ಉದ್ದೇಶದಿಂದಲೇ ಈ ಅಪಪ್ರಚಾರ ಮಾಡಲಾಗಿದೆ. ನಕಲಿ ಖಾತೆ ಮೂಲಕ ಅಪಪ್ರಚಾರ ನಡೆಸಿ ಮಾನ ಹಾನಿ ಮಾಡುವ ದೊಡ್ಡ ಜಾಲ ಸಕ್ರಿಯವಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.

ಸಮಾಜದಲ್ಲಿ ಶಾಂತಿ ಕದಡುವ ಇಂತಹ ಪೋಸ್ಟ್‌ಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಹಿಂದೂ ಸಂಘಟನೆಗಳು ನೀಡಿವೆ. ಅಲ್ಲದೆ ವಾಟ್ಸ್ಆ್ಯಪ್ ಪೇಜ್ ಮೇಲೆ ದೂರು ದಾಖಲಿಸಿದ್ದು, ತಕ್ಷಣ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.

ABOUT THE AUTHOR

...view details