ಕರ್ನಾಟಕ

karnataka

ETV Bharat / city

ಫೇಸ್​ಬುಕ್ ಫ್ರೆಂಡ್​ನಿಂದ ಉಡುಗೊರೆ ಆಮಿಷ: 1.35 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! - Mangalore Cyber Police Station

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಫೇಸ್​ಬುಕ್​ನಲ್ಲಿ ಪರಿಚಯವಾದ ವ್ಯಕ್ತಿಯೋರ್ವ ಚಿನ್ನ ಮತ್ತು ಡೈಮಂಡ್​ ಉಡುಗೊರೆ ಕಳುಹಿಸಿಸುವುದಾಗಿ ನಂಬಿಸಿ, 1.35 ಲಕ್ಷ ರೂ. ವಂಚನೆ ಮಾಡಿದ್ದಾನೆ.

facebook-friend-to-cheated-to-a-man
ಫೇಸ್​ಬುಕ್ ಫ್ರೆಂಡ್​ನಿಂದ ಉಡುಗೊರೆ ಆಮಿಷ: 1.35 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ!

By

Published : Jan 28, 2021, 11:16 AM IST

ಮಂಗಳೂರು:ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ನೇಹಿತ ಚಿನ್ನದ ಉಡುಗೊರೆ ಕಳುಹಿಸಿದ್ದಾರೆ ಎಂಬುದನ್ನು ನಂಬಿ, ಮಂಗಳೂರಿನ ವ್ಯಕ್ತಿಯೊಬ್ಬರು 1.35 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಫೇಸ್​ಬುಕ್​ನಲ್ಲಿ ರೇನಾಲ್ಟ್ ಫ್ರೀನ್ಸ್ ಕ್ರಿಸ್ಟಫರ್ ಎಂಬ ವ್ಯಕ್ತಿ ಪರಿಚಯವಾಗಿದ್ದರು. ಇವರಿಬ್ಬರ ನಡುವೆ ನಿರಂತರ ಚಾಟಿಂಗ್​​ ನಡೆಯುತ್ತಿತ್ತು. ಆ ವ್ಯಕ್ತಿ 35 ಲಕ್ಷದ ಚಿನ್ನ ಮತ್ತು ಡೈಮಂಡ್​ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದ.

ಬಳಿಕ ಜ. 18ರಂದು ಮಂಗಳೂರಿನ ವ್ಯಕ್ತಿಗೆ 8754231656 ಎಂಬ ನಂಬರ್​ನಿಂದ ಮಹಿಳೆಯೊಬ್ಬರು ಕರೆ ಮಾಡಿ, ದಿಲ್ಲಿ ಕಸ್ಟಮ್ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದಾರೆ. ನಂತರ ನಿಮಗೆ ಡೆಲ್ಲಿ ಏರ್​ಪೋರ್ಟ್​ನಿಂದ​ ಒಂದು ಪಾರ್ಸೆಲ್ ಬಂದಿದ್ದು, ಅದರ ಡೆಲಿವರಿ ಚಾರ್ಜ್​ ಆಗಿ 30 ಸಾವಿರ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಓದಿ:ಸುರತ್ಕಲ್​ನಲ್ಲಿ ಯುವಕನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು

ಮತ್ತೆ ಜ.20ರಂದು ಕರೆ ಮಾಡಿ, ವಿವಿಧ ಕಾರಣಗಳನ್ನು ತಿಳಿಸಿ 1,05,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗೆ ಒಟ್ಟು 1.35 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಹಣ ಕಳೆದುಕೊಂಡ ಬಳಿಕ ಮಂಗಳೂರಿನ ವ್ಯಕ್ತಿಗೆ, ಇದು ವಂಚನೆ ಪ್ರಕರಣ ಎಂದು ತಿಳಿದು ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ABOUT THE AUTHOR

...view details