ಮಂಗಳೂರು: ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ದೃಢೀಕರಿಸಲು ಬಯೋಮೆಟ್ರಿಕ್ ಬಳಸುವುದು ಎಲ್ಲಾ ಕಡೆಗಳಲ್ಲಿ ಮಾಮೂಲು. ಆದರೆ ಕೋವಿಡ್ ಬಳಿಕ ಈ ರೀತಿಯಲ್ಲಿ ಹಾಜರಾತಿಯನ್ನು ನಿಭಾಯಿಸುವುದು ಕಷ್ಟಕರವಾಗಿದೆ. ಆದ್ದರಿಂದ ಸುರಕ್ಷಿತ ಹಾಜರಾತಿ ವಿಧಾನ ಅನುಸರಿಸಲು ಕಚೇರಿಗಳಲ್ಲಿ ಪರ್ಯಾಯ ಮಾರ್ಗವನ್ನು ಅನುಸರಿಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ದುಬಾರಿ ವೆಚ್ಚದ ಫೇಸ್ ರೆಕೆಗ್ನಿಷನ್ (ಮುಖ ಗುರುತಿಸುವಿಕೆ) ಸಿಸ್ಟಂ ಅನ್ನು ಕೈಗಾರಿಕಾ ವಲಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ (ಕೆಐಒಸಿಎಲ್) ತನ್ನ ಮಂಗಳೂರು ಕಚೇರಿಯಲ್ಲಿ ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿದ್ದು, ಇಂದಿನಿಂದ (ನ.6) ಜಾರಿಗೆ ಬರುತ್ತಿದೆ. ಇದು ಕೃತಕ ಬುದ್ಧಿ ಮತ್ತೆ ವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.