ETV Bharat Karnataka

ಕರ್ನಾಟಕ

karnataka

ETV Bharat / city

ಮೈತ್ರಿ ವಿರುದ್ಧ ಆಕ್ರೋಶ, ಪಕ್ಷದಲ್ಲೇ ಇದ್ದೇನೆ...ಶಿವರಾಮ್ ಹೆಬ್ಬಾರ್​ ಫೇಸ್​​​ಬುಕ್​ ಪೋಸ್ಟ್​ - undefined

ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದು ಮುಂಬೈ ಸೇರಿಕೊಂಡಿರುವ ಯಲ್ಲಾಪುರ - ಮುಂಡಗೋಡ ಶಾಸಕ ಶಿವರಾಮ್ ಹೆಬ್ಬಾರ್ ಅವರು, ತಮ್ಮ ಫೇಸ್​ಬುಕ್​ ಮೂಲಕ ಪಕ್ಷದ ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Shivaram hebbar
author img

By

Published : Jul 15, 2019, 1:17 PM IST

ಕಾರವಾರ: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದು ಮುಂಬೈ ಸೇರಿಕೊಂಡಿರುವ ಯಲ್ಲಾಪುರ - ಮುಂಡಗೋಡ ಶಾಸಕ ಶಿವರಾಮ್ ಹೆಬ್ಬಾರ್ ಅವರು, ತಮ್ಮ ಫೇಸ್​ಬುಕ್​ ಮೂಲಕ ಪಕ್ಷದ ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಹಾಗೆಯೇ ಕಾರ್ಯಕರ್ತರು ಮತ್ತು ಮತದಾರ ಬಾಂಧವರಿಗೆ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆಯನ್ನೂ ಯಾಚಿಸಿರುವ ಅವರು, ಇಂಥ ಕಠಿಣ ನಿರ್ಧಾರಕ್ಕೆ ಬರಲು ಸಮ್ಮಿಶ್ರ ಸರ್ಕಾರ, ಪಕ್ಷದ ಹಿರಿಯ ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಂದು ನೇರ ಆರೋಪ ಮಾಡಿದ್ದಾರೆ.

in article image
ಶಿವರಾಮ್ ಹೆಬ್ಬಾರ್ ಅವರ​ ಫೇಸ್ಬುಕ್​ ಪೋಸ್ಟ್.

ಸಮ್ಮಿಶ್ರ ಸರ್ಕಾರದಿಂದ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಸರ್ಕಾರದ ತಾರತಮ್ಯ ನೀತಿ, ಮತ್ತೊಂದೆಡೆ ಪಕ್ಷದ ಹಿರಿಯ ನಾಯಕರು. ಮುಂದೆ ನಿಂತು ಸಮಸ್ಯೆ ಬಗೆರಿಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಿಗಳೂ ನನ್ನ ಕ್ಷೇತ್ರದ ಸಮಸ್ಯೆ ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನು ತೋರಲಿಲ್ಲ. ಇದರಿಂದ ಮತದಾರರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡ ಯೋಜನೆಗಳಿಗೂ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ. ರಾಜ್ಯಾದ್ಯಂತ ಬಿಜೆಪಿ ಅಲೆಯಿದ್ದರೂ, ಅಭಿವೃದ್ಧಿಯನ್ನಷ್ಟೇ ಪರಿಗಣಿಸಿ ನನ್ನನ್ನು ಆರಿಸಿದ್ದಾರೆ. ಕ್ಷೇತ್ರದ ಜನರಿಗೆ ಯಾವ ಹೊಸ ಯೋಜನೆಗಳನ್ನೂ ತರಲಾಗದೇ, ತಂದ ಯೋಜನೆಯನ್ನು ಜಾರಿಗೊಳಿಸದೇ ಸಮರ್ಥಿಸಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಹಗಲು - ರಾತ್ರಿ ನನ್ನ ಪರ ಚುನಾವಣೆಯಲ್ಲಿ ಶ್ರಮಿಸಿದ್ದೀರಿ. ಅದನ್ನು ಎಂದೂ ಮರೆಯಲಾರೆ. ನನ್ನ ಕ್ಷೇತ್ರದ ಹಿತಾಸಕ್ತಿಯೇ ಮುಖ್ಯ. ಯಾವುದೇ ಹಣ, ಆಸೆ ಆಮಿಷಗಳಿಗೆ ನನ್ನ ನೈತಿಕತೆ ಮಾರಿಕೊಳ್ಳುವುದಿಲ್ಲ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಎರಡೂ ಪಕ್ಷಗಳ ನಾಯಕರ ಕಚ್ಚಾಟಗಳಿಂದ ಅಭಿವೃದ್ಧಿ ಕೆಲಸಗಳಾಗದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ ಎಂದು ದೂರಿದ್ದಾರೆ.

ಈ ಮೈತ್ರಿಯಿಂದ ಪಕ್ಷಕ್ಕೂ ಕೂಡ ಭರಿಸಲಾಗದ ಹಾನಿಯಾಗಿದೆ. ಇದೇ ರೀತಿ, ಮಂದುವರಿದರೆ ಚುನಾವಣೆಯಲ್ಲಿ ಮುಂದೆ ಮತಕೇಳಲು ಕಷ್ಟವಾದೀತು. ನನ್ನ ರಾಜೀನಾಮೆ ನಿನ್ನೆ- ಮೊನ್ನೆ ನಡೆದ ಹಠಾತ್ ಬೆಳವಣಿಗೆಯಲ್ಲ. ಸತತ 15 ತಿಂಗಳು ಅಳೆದೂ - ತೂಗಿ, ಪಕ್ಷದ/ಸರ್ಕಾರದ ಪರಿಮಿತಿಯಲ್ಲಿ ಎಲ್ಲ ಪ್ರಯತ್ನಗಳೂ ಮುಗಿದ ನಂತರ ಮುಖಂಡರಿಗೆ ತಿಳಿಸಿದ್ದೇನೆ. ಬಳಿಕ ಸಮಾನ ಮನಸ್ಕ ಶಾಸಕರೊಡನೆ ಸಮಾಲೋಚಿಸಿ, ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿವೃದ್ಧಿ ಇಲ್ಲದೇ 5 ವರ್ಷ ಅಧಿಕಾರವನ್ನು ಅನುಭವಿಸಿ, ಶಾಸಕನಾಗೇ ಮುಂದುವರಿಯುವುದು ಸುಲಭದ ಆಯ್ಕೆಯಾಗಿತ್ತು. ಆದರೆ, ಕ್ಷೇತ್ರದ ಹಿತಾಸಕ್ತಿಗಾಗಿ ರಾಜೀನಾಮೆ ಕೊಟ್ಟು, ಅದರ ಪರಿಣಾಮಗಳನ್ನು ಎದುರಿಸಿ, ಪಕ್ಷದ ನಾಯಕರ ಸಿಟ್ಟು, ಅಧಿಕಾರದ ಬಲಪ್ರಯೋಗಗಳನ್ನೂ ಎದುರಿಸಿ, ಮತ್ತೆ ಜನರ ಬಳಿ ಹೋಗುವ ಗಟ್ಟಿಯಾದ ನಿರ್ಧಾರ ಮಾಡಿದ್ದೇನೆ. ಆದರೆ ಇನ್ನೂ ಪಕ್ಷದಲ್ಲಿಯೇ ಇದ್ದೇನೆ. ಅತೀ ಶೀಘ್ರದಲ್ಲಿಯೇ ಕ್ಷೇತ್ರದ್ಯಾಂತ ಸಂಚರಿಸಿ ಎಲ್ಲ ಕಾರ್ಯಕರ್ತರಲ್ಲಿ ಈ ಕುರಿತು ವಿಷಯ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details