ಮಂಗಳೂರು:ಶಾಲೆ ಕಟ್ಟಬೇಕೆಂಬ ಕನಸನ್ನು ಕಟ್ಟಿ ಅದನ್ನು ನನಸು ಮಾಡಿಕೊಂಡ ಅಕ್ಷರ ಸಂತ ಹರೇಕಳ ಹಾಜಬ್ಬ (Harekala Hajabba) ಇತ್ತೀಚೆಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ(Padma Shri award)ಯನ್ನು ಅವರು ಪಡೆದುಕೊಂಡಿದ್ದಾರೆ.
ಈಟಿವಿ ಭಾರತ ಸಂದರ್ಶನದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಂಗಳೂರಿನಲ್ಲಿ ಕಿತ್ತಲೆ ಹಣ್ಣು ಮಾರಾಟ ಮಾಡುತ್ತಿದ್ದ ಹರೇಕಳ ಹಾಜಬ್ಬ ಅವರಿಗೆ ಹಲವು ವರ್ಷಗಳ ಹಿಂದೆ ವಿದೇಶಿ ಪ್ರವಾಸಿಯೊಬ್ಬರು ಕಿತ್ತಳೆ ಹಣ್ಣಿನ ಬೆಲೆಯನ್ನು ಇಂಗ್ಲೀಷ್‌ನಲ್ಲಿ ಕೇಳಿದಾಗ, ಅವರು ಕೇಳಿದ್ದು ಅರ್ಥವಾಗದೇ ಮುಜುಗರ ಅನುಭವಿಸಿದ್ದರು.
ಏಕೆಂದರೆ ಅವರಿಗೆ ಯಾವುದೇ ರೀತಿಯ ಔಪಚಾರಿಕ ಶಿಕ್ಷಣದ ಸವಲತ್ತು ಇರಲಿಲ್ಲ. ಅಕ್ಷರ ಕಲಿಯದಿದ್ದರೆ ಇಂತಹ ಮುಜುಗರ ಅನುಭವಿಸಲೇಬೇಕಾಗುತ್ತದೆ ಎಂದು ಅರಿತುಕೊಂಡ ಅವರು ತನ್ನೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಲೆ ಕಟ್ಟಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.
ಈಟಿವಿ ಭಾರತ ಸಂದರ್ಶನದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವಿರತ ಶ್ರಮದಿಂದ ಶಾಲೆಯನ್ನು ಆರಂಭಿಸಿದ ಹರೇಕಳ ಹಾಜಬ್ಬ ಅವರಿಗೆ ಸಾಲು ಸಾಲು ಪ್ರಶಸ್ತಿ ಹುಡುಕಿಕೊಂಡು ಬಂದವು. ಈ ರೀತಿ ಪ್ರಶಸ್ತಿಯೊಂದಿಗೆ ಬಂದ ಸುಮಾರು 70 ಲಕ್ಷ ರೂ. ಹಣವನ್ನು ಶಾಲೆಯ ಅಭಿವೃದ್ಧಿಗಾಗಿ ಬಳಸಿದವರು ಹರೇಕಳ ಹಾಜಬ್ಬ. ಅವರ ನಿಸ್ವಾರ್ಥ ಸೇವೆಗೆ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ (Padma Shri award) ಸಿಕ್ಕಿದೆ.
ಈಟಿವಿ ಭಾರತ ಸಂದರ್ಶನದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಈ ಪ್ರಶಸ್ತಿ ಸಿಕ್ಕ ಬಳಿಕವು ಅವರು ಸುಮ್ಮನಾಗಿಲ್ಲ. ತನ್ನೂರಿನಲ್ಲಿ ಆರಂಭವಾಗಿರುವ ಶಾಲೆಯ ಜತೆಗೆ ಪಿಯುಸಿ ಆರಂಭಕ್ಕಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕದ ಮತ್ತು ಕೇರಳದ ಶಾಲೆಯ ಪಠ್ಯಪುಸ್ತಕದಲ್ಲಿ ಇವರ ಜೀವನಗಾಥೆ ಪ್ರಕಟವಾಗಿದೆ. ಅಕ್ಷರ ಸಂತ ಹರೇಕಳ ಹಾಜಬ್ಬ ಅವರೊಂದಿಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಸಂದರ್ಶನ ಇಲ್ಲಿದೆ.
ಇದನ್ನೂ ಓದಿ:ಹರೇಕಳ ಹಾಜಬ್ಬರಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರದಾನ