ಕರ್ನಾಟಕ

karnataka

ETV Bharat / city

ಬಜೆಟ್ ನಿರೀಕ್ಷೆ: ಸಾಗರಮಾಲಾ ಯೋಜನೆಯಡಿ ಬಂದರು ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು - ಸಾಗರಮಾಲಾ ಯೋಜನೆ

ಸಾಗರಮಾಲಾ ಯೋಜನೆಯಡಿ ಬಂದರು ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ರೀತಿಯಲ್ಲಿ ಬಂಡವಾಳ ಹೂಡಿದಲ್ಲಿ ಜಿಲ್ಲೆಯ ಆರ್ಥಿಕತೆ ಅಭಿವೃದ್ಧಿ ಆಗಲಿದೆ.

port
ಮಂಗಳೂರು

By

Published : Jan 31, 2021, 9:34 PM IST

ಮಂಗಳೂರು:ಕೇಂದ್ರ ಸರ್ಕಾರದ ಬಜೆಟ್ ನಾಳೆ ಮಂಡನೆಯಾಗಲಿದ್ದು, ದ.ಕ ಜಿಲ್ಲೆಗೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.

ಸಾಗರಮಾಲಾ ಯೋಜನೆಯಡಿ ಬಂದರು ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ರೀತಿಯಲ್ಲಿ ಬಂಡವಾಳ ಹೂಡಿದಲ್ಲಿ ಜಿಲ್ಲೆಯ ಆರ್ಥಿಕತೆ ಅಭಿವೃದ್ಧಿ ಆಗಲಿದೆ ಎಂದು ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಐಸಾಕ್ ವಾಸ್ ಹೇಳಿದರು.

ಅದೇ ರೀತಿ ದೇಶೀಯ ಖಾಸಗಿ ಕೈಗಾರಿಕಾ ವಲಯವನ್ನು ಅಭಿವೃದ್ಧಿ ಮಾಡಿದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಅಲ್ಲದೆ ಬೇಡಿಕೆ ಹಾಗೂ ಪೂರೈಕೆಯು ಹೆಚ್ಚಾಗಲಿದ್ದು, ಸ್ಥಳೀಯ ಯುವಕರಿಗೂ ಉದ್ಯೋಗ ಹೆಚ್ಚಲಿದೆ ಎಂದರು.

ಸಣ್ಣ ಕೈಗಾರಿಕೆಗಳ ಮೂಲ ಸೌಕರ್ಯವನ್ನು ಅಭಿವೃದ್ಧಿ ಮಾಡಿ ಬಂಡವಾಳ ಹೂಡಿದಲ್ಲಿ ಹೆಚ್ಚಿನ ರೀತಿಯಲ್ಲಿ ಉದ್ಯೋಗ ಹಾಗೂ ಆರ್ಥಿಕತೆಯು ಅಭಿವೃದ್ಧಿ ಆಗಲಿದೆ ಎಂದು ಐಸಾಕ್ ವಾಸ್ ಹೇಳಿದರು.

ABOUT THE AUTHOR

...view details