ಕರ್ನಾಟಕ

karnataka

ETV Bharat / city

ಸುರತ್ಕಲ್​ ಎನ್ಐಟಿಕೆ ಕ್ಯಾಂಪಸ್‌ ಆವರಣದಲ್ಲಿ ಸಂಚರಿಸಲಿದೆ ವಿಧ್‌ಯುಗ್‌ 2.1 ಇಲೆಕ್ಟ್ರಿಕ್‌ ಸ್ಕೂಟರ್ - surathkal latest news

ಕಾಲೇಜು​​ ಕ್ಯಾಂಪಸ್‌ನ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಫೈಲ್‌ಗಳನ್ನು, ಕಾಗದ ಪತ್ರಗಳು ಮತ್ತು ಯಾವುದೇ ವಸ್ತುಗಳನ್ನು ವಾಯುಮಾಲಿನ್ಯಗೊಳಿಸದೇ ರವಾನೆ ಮಾಡುವ ಉದ್ದೇಶದಿಂದ ವಿಧ್‌ಯುಗ್‌ 2.1 ಎಂಬ ಇಲೆಕ್ಟ್ರಿಕ್‌ ಸ್ಕೂಟರ್​ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಇಲೆಕ್ಟ್ರಿಕ್‌ ಸ್ಕೂಟರ್​ ಅನ್ನು ಕ್ಯಾಂಪಸ್‌ನ ಸಿಬ್ಬಂದಿ ಬಳಸಲಿದ್ದಾರೆ ಎಂದು ಎನ್ಐಟಿಕೆ ಕಾಲೇಜಿನ ಅಡಳಿತಾಧಿಕಾರಿಗಳು ತಿಳಿಸಿದ್ದಾರೆ.

electric scooter will arrive to NITK campus
ವಿಧ್‌ಯುಗ್‌ 2.1 ಇಲೆಕ್ಟ್ರಿಕ್‌ ಸ್ಕೂಟರ್

By

Published : Aug 13, 2021, 11:42 AM IST

ಸುರತ್ಕಲ್‌: ಕ್ಯಾಂಪಸ್‌ ಆವರಣದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ನಗರದ ಎನ್ಐಟಿಕೆ ಯು ವಿಧ್‌ಯುಗ್‌ 2.1 ಎಂಬ ಇಲೆಕ್ಟ್ರಿಕ್‌ ಸ್ಕೂಟರ್​ ಅಭಿವೃದ್ಧಿಪಡಿಸಿದೆ.

ಕ್ಯಾಂಪಸ್‌ನ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಫೈಲ್‌ಗಳನ್ನು, ಕಾಗದ ಪತ್ರಗಳನ್ನು ಯಾವುದೇ ವಸ್ತುಗಳನ್ನು ವಾಯುಮಾಲಿನ್ಯಗೊಳಿಸದೇ ರವಾನಿಸುವ ಉದ್ದೇಶದಿಂದ ಈ ಸ್ಕೂಟರ್​ ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ಮಾನವ ಸ್ನೇಹಿಯಾಗಿಯೂ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶವೂ ಇದರಲ್ಲಿ ಅಡಗಿದೆ.

ಎನ್‌ಐಟಿಕೆ ಸುರತ್ಕಲ್‌ನ ಡೈರೆಕ್ಟರ್‌ ಪ್ರೊ.ಕರ್ಣಂ ಉಮಾಮಹೇಶ್ವವರ್‌ ಈಗಾಗಲೇ ಈ ವಾಹನದ ಪ್ರಾಯೋಗಿಕ ಚಾಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಇಲೆಕ್ಟ್ರಿಕ್‌ ಸ್ಕೂಟರ್​ ಅನ್ನು ಕ್ಯಾಂಪಸ್‌ನ ಸಿಬ್ಬಂದಿ ಬಳಸಲಿದ್ದಾರೆ ಎಂದು ಕಾಲೇಜಿನ ಅಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಈ ಇಲೆಕ್ಟ್ರಿಕ್‌ ಸ್ಕೂಟರ್‌ ಸುಮಾರು 250Wನ ಮೋಟಾರ್‌ ಮತ್ತು 48V ಸಾಮರ್ಥ್ಯದ ಬ್ಯಾಟರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಸಂಪೂರ್ಣವಾಗಿ ಚಾರ್ಜ್‌ ಆಗಲು ಸುಮಾರು 5 ಗಂಟೆಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ಆದರೆ ಫಾಸ್ಟ್‌ಚಾರ್ಜ್‌ ಮಾಡಿದಲ್ಲಿ ಕೇವಲ ಮೂರು ಗಂಟೆಯಲ್ಲಿ ಸಂಪೂರ್ಣ ಚಾರ್ಜ್‌ ಆಗುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್‌ ಆದ ಬಳಿಕ ಸುಮಾರು 45 ರಿಂದ 50 ಕಿ.ಮೀ. ದೂರ ಕ್ರಮಿಸಬಹುದು. ಇದರ ಟಾಪ್‌ ಸ್ಪೀಡ್‌ 25 ಕಿಮೀ/ಗಂಟೆಯಾಗಿದೆ.

ಎನ್‌ಐಟಿಕೆ ಕಾಲೇಜಿನ ಅನ್ವಯಿಕ ಮೆಕಾನಿಕ್ಸ್‌ ಮತ್ತು ಹೈಡ್ರಾಲಿಕ್ಸ್‌ ವಿಭಾಗದ ಸಹಾಯಕ ಪ್ರೊಫೆಸರ್‌ ಮತ್ತು ಸೆಂಟರ್‌ ಫಾರ್‌ ಸಿಸ್ಟಮ್‌ ಡಿಸೈನ್‌ನ ಸಹ ಅಧ್ಯಾಪಕರೂ ಆಗಿರುವಂತಹ ಪೃಥ್ವಿರಾಜ್‌.ಯು ಅವರು ಮಾತನಾಡಿ, ಕ್ಯಾಂಪಸ್‌ನ ಆವರಣದಲ್ಲಿ ಕಚೇರಿ ಕೆಲಸಗಳಿಗೆ ಮೋಟಾರ್‌ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ವಾಯುಮಾಲಿನ್ಯದ ಪ್ರಮಾಣವನ್ನು ನಿಯಂತ್ರಿಸುವ ನಿಟ್ಟಿನಿಂದ ವಿಧ್‌ಯುಗ್‌ ಸರಣಿಯ ಇ-ವಾಹನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಇದನ್ನೂ ಓದಿ:ಕೊಪ್ಪಳದಲ್ಲಿ ನಾಗರ ಪಂಚಮಿ ಸಂಭ್ರಮ: ನಾಗಕಟ್ಟೆಗಳಲ್ಲಿ ಹಾಲೆರೆದ ಜನರು

ಪ್ರತಿನಿತ್ಯವೂ ಕ್ಯಾಂಪಸ್​ನಲ್ಲಿ ಫೈಲ್‌ಗಳನ್ನು ಮತ್ತು ಇತರೆ ಕಾಗದ ಪತ್ರಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಮಾಡಲು ಸುಮಾರು 20 ರಿಂದ 25 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಾಗುತ್ತದೆ. ಅಂದರೆ 14 ಇಂಜಿನಿರಿಂಗ್‌ ವಿಭಾಗಗಳು ಸೇರಿ ಸುಮಾರು 60ರಷ್ಟು ಕಚೇರಿಗಳಿಗೆ ಹೋಗಬೇಕಾಗುತ್ತದೆ. ಇದರಿಂದ ವರ್ಷಕ್ಕೆ ಸುಮಾರು 10 ಕೆಜಿಗಳಷ್ಟು ಇಂಗಾಲ ಕಾಲೇಜಿನ ಆವರಣದಲ್ಲಿ ಬಿಡುಗಡೆಯಾಗುತ್ತದೆ. ವಿಧ್‌ಯುಗ್‌ 2.1 ಬಳಸುವುದರಿಂದ ಈ ಇಂಗಾಲವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದರು.

ಇದರ ಹಿಂದಿನ ವಾಹನವಾದ ವಿಧ್‌ಯುಗ್‌ 2.0 ಕುರಿತಾಗಿ ಬಂದಿದ್ದಂತಹ ಎಲ್ಲ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ತಂಡವಾದ ಪ್ರೊ. ಕೆ.ವಿ. ಗಂಗಾಧರನ್‌, ಸಂಶೋಧನಾ ವಿದ್ಯಾರ್ಥಿಗಳಾದ ರಕ್ಷಿತ್‌ ಕೋಟ್ಯಾನ್‌, ಸ್ಟೀವನ್‌ ಲಾಯ್ಡ್‌, ರಜತ್‌ ಸಿ. ಕೋಟೆಕಾರ್‌, ಲತೀಶ್‌ ಶೆಟ್ಟಿ, ಸಂದೇಶ್‌ ಭಕ್ತ ಮತ್ತು ಅನುರಾಧ ಎಸ್‌. ಮೊದಲಾದವರ ತಂಡ ವಿಧ್‌ಯುಗ್‌2.1 ನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.

ABOUT THE AUTHOR

...view details