ಮಂಗಳೂರು: ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ ನಾಲ್ಕನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ 'ಮಂಗಳೂರು ಕಂಬಳ'ಕ್ಕೆ ಕಂಕನಾಡಿ ಬ್ರಹ್ಮಬೈದ್ಯರ್ಕಳ ಗರಡಿಯ ಅಧ್ಯಕ್ಷ ಚಿತ್ತರಂಜನ್ ರಾಸ್ ಇಂದು ಚಾಲನೆ ನೀಡಿದರು.
ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆಯುವ ಈ ಕಂಬಳವು ಮಂಗಳೂರು ನಗರದೊಳಗೆ ನಡೆಯುವ ಏಕೈಕ ಕಂಬಳವೆಂದು ಹೆಗ್ಗಳಿಕೆ ಪಡೆದಿದೆ. ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಕೃತಕವಾಗಿ ನಿರ್ಮಿಸಲಾಗಿರುವ 145 ಮೀ. ಉದ್ದದ ಜೋಡುಕರೆಯಲ್ಲಿ ಇಂದಿನಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೆ ಕಂಬಳ ನಡೆಯಲಿದೆ. ಈ ಬಾರಿ ಆರು ವಿಭಾಗಗಳಲ್ಲಿ 120 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.