ಬಂಟ್ವಾಳ:ಬಂಟ್ವಾಳ ಮತ್ತು ಉಳ್ಳಾಲ ತಾಲೂಕುಗಳ ಮಧ್ಯೆ ಇರುವ ಇರಾ ಎಂಬಲ್ಲಿ ದೇಶದ ಎರಡನೇ ಹಾಗೂ ರಾಜ್ಯದ ಪ್ರಥಮ ಎನ್ನಲಾದ ಕತ್ತೆ ಸಾಕಣೆ ಮತ್ತು ಮಾದರಿ ತರಬೇತಿ ಕೇಂದ್ರ ಆರಂಭಗೊಳ್ಳಲಿದೆ. ಐಸಿರಿ ಫಾರ್ಮ್ಸ್ ಅವರ ಮೂಲಕ ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಅನುಷ್ಠಾನಗೊಳ್ಳಲಿದೆ.
ರಾಮನಗರ ಮೂಲದ ಇಂಜಿನಿಯರ್ ಶ್ರೀನಿವಾಸ ಗೌಡ ಮಾಲೀಕತ್ವದಲ್ಲಿ ಕೇಂದ್ರ ಕಾರ್ಯಾಚರಣೆ ನಡೆಸಲಿದೆ. ಇದು ಜೂನ್ 8ರಂದು ಕಾರ್ಯಾರಂಭಗೊಳ್ಳಲಿದೆ. ಇಲ್ಲಿಂದ ಪೌಷ್ಟಿಕಾಂಶಯುಕ್ತ ಎನ್ನಲಾದ ಕತ್ತೆ ಹಾಲು ಉತ್ಪಾದನೆ ಮಾಡಲಾಗುತ್ತದೆ. ಕತ್ತೆ ಹಾಲು ಪೌಷ್ಟಿಕಾಂಶ ಒಳಗೊಂಡಿರುವ ಜತೆಗೆ ಬಹಳ ದುಬಾರಿ. ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಈ ಕೇಂದ್ರದಲ್ಲಿ 20 ಕತ್ತೆಗಳಿವೆ ಎಂಬುದಾಗಿ ತಿಳಿದು ಬಂದಿದೆ.