ಮಂಗಳೂರು: ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತ, ಉಪ ಪೊಲೀಸ್ ಆಯುಕ್ತರ ಬಿಪಿ ತಪಾಸಣೆ ಮಾಡಿ ಗಮನ ಸೆಳೆದಿದ್ದಾರೆ.
ಕಮಿಷನರ್, ಡಿಸಿಪಿಯವರಿಗೆ ಬಿಪಿ ತಪಾಸಣೆ ಮಾಡಿ ಗಮನ ಸೆಳೆದ ದ.ಕ. ಜಿಲ್ಲಾಧಿಕಾರಿ - ಕಮಿಷನರ್, ಡಿಸಿಪಿಯವರಿಗೆ ಬಿಪಿ ತಪಾಸಣೆ
ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಇದ್ದರೂ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತಾವೇ ಸ್ವತಃ ಪೊಲೀಸ್ ಕಮಿಷನರ್, ಉಪ ಪೊಲೀಸ್ ಆಯುಕ್ತರ ಬಿಪಿ ತಪಾಸಣೆ ಮಾಡಿ ತಮ್ಮ ಮೂಲ ವೃತ್ತಿಯನ್ನು ನೆನಪಿಸಿಕೊಂಡರು.
ಇದೇನಿದು ಜಿಲ್ಲಾಧಿಕಾರಿಯವರು ಬಿಪಿ ತಪಾಸಣೆ ಮಾಡಿದ್ದಾರಾ ಎಂದು ಆಶ್ಚರ್ಯ ಆಗಬೇಡಿ! ಸ್ವತಃ ಡಾಕ್ಟರ್ ಆಗಿರುವ ಡಾ.ಕೆ.ವಿ.ರಾಜೇಂದ್ರ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಉಪ ಪೊಲೀಸ್ ಆಯುಕ್ತರಾದ ವಿನಯ್ ಗಾಂವ್ಕರ್ ಹಾಗೂ ಹರಿರಾಂ ಶಂಕರ್ ಅವರಿಗೆ ಬಿಪಿ ತಪಾಸಣೆ ಮಾಡಿದರು.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಎರಡನೇ ಹಂತದ ಕೋವಿಡ್ ಲಸಿಕಾ ಅಭಿಯಾನದ ಸಂದರ್ಭ ಬಿಪಿ ತಪಾಸಣೆ ಮಾಡಿ ಎಲ್ಲರ ಗಮನ ಸೆಳೆದರು. ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಇದ್ದರೂ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತಾವೇ ಸ್ವತಃ ಪೊಲೀಸ್ ಕಮಿಷನರ್, ಉಪ ಪೊಲೀಸ್ ಆಯುಕ್ತರ ಬಿಪಿ ತಪಾಸಣೆ ಮಾಡಿ ತಮ್ಮ ಮೂಲ ವೃತ್ತಿಯನ್ನು ನೆನಪಿಸಿಕೊಂಡರು.