ಮಂಗಳೂರು: ಬಿಸಿಯೂಟದ ಯೋಜನೆಯಂತೆ ಪ್ರತಿದಿನ ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಅನ್ನವನ್ನು ಕೊರೊನಾ ಹಿನ್ನೆಲೆ ಇಲ್ಲಿನ ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಲ್ಲಿಸಲಾಗುತ್ತು. ಈಗ ಪುನಃ ಸರ್ಕಾರದ ಆದೇಶದಂತೆ ತಿಂಗಳ ಬಿಸಿಯೂಟದ ಅಕ್ಕಿ, ಬೇಳೆಯನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ಕೊರೊನಾ ಬಿಸಿ: ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಅಕ್ಕಿ, ಬೇಳೆ ವಿತರಣೆ - ಅನ್ನದಾಸೋಹ ಯೋಜನೆ
ಕೊರೊನಾ ವೈರಸ್ನ ಹಾವಳಿಯಿಂದ ಮಾರ್ಚ್ 14ರ ಬಳಿಕ ಅನ್ನದಾಸೋಹವನ್ನು ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಲ್ಲಿಸಲಾಗಿದೆ. ಈಗ ಪುನಃ ಸರ್ಕಾರದ ಆದೇಶದಂತೆ ತಿಂಗಳ ದಾಸೋಹದ ಅಕ್ಕಿ, ಬೇಳೆಯನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.
![ಕೊರೊನಾ ಬಿಸಿ: ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಅಕ್ಕಿ, ಬೇಳೆ ವಿತರಣೆ ಶಾಲಾ ಮಕ್ಕಳಿಗೆ ವಿತರಣೆ](https://etvbharatimages.akamaized.net/etvbharat/prod-images/768-512-6608270-thumbnail-3x2-hbhb.jpg)
ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರದ ಬಿಸಿಯೂಟದ ಯೋಜನೆಯಂತೆ ದಿನ೦ಪ್ರತಿ ಶಾಲಾ ಮಕ್ಕಳಿಗೆ ಅನ್ನವನ್ನು ನೀಡಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ ಮಾರ್ಚ್ 14ರ ಬಳಿಕ ಬಿಸಿಯೂಟ ನಿಲ್ಲಿಸಲಾಗಿದೆ. ಈಗ ಪುನಃ ಸರ್ಕಾರದ ಆದೇಶದಂತೆ ತಿಂಗಳ ಬಿಸಿಯೂಟದ ಅಕ್ಕಿ, ಬೇಳೆಯನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ಒಂದರಿಂದ ಐದನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ದಿನದಂತೆ 100 ಗ್ರಾ೦ ಅಕ್ಕಿ, 50 ಗ್ರಾ೦ ಬೇಳೆ ಹಾಗೂ 6ರಿಂದ 7ನೇ ತರಗತಿಯ ಮಕ್ಕಳಿಗೆ 150 ಗ್ರಾ೦ ಅಕ್ಕಿ ಹಾಗೂ 75 ಗ್ರಾ೦ ಬೇಳೆಯನ್ನು ಒಟ್ಟು 21 ದಿನ ಆಗುವಷ್ಟು ವಿದ್ಯಾರ್ಥಿಗಳ ಪೋಷಕರಿಗೆ ವಿತರಿಸಲಾಯಿತು.