ಮಂಗಳೂರು:ಎಂಆರ್ಪಿಎಲ್ನಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದನ್ನು ವಿರೋಧಿಸಿ ಎಂಆರ್ಪಿಎಲ್ ಮುಖ್ಯ ದ್ವಾರದ ಎದುರು ಡಿವೈಎಫ್ಐ ಪ್ರತಿಭಟಿಸಿತು.
ಎಂಆರ್ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರ ಕಡೆಗಣನೆ ಆರೋಪ: ಪ್ರತಿಭಟನೆ
ದಕ್ಷಿಣ ಕನ್ನಡದಲ್ಲಿ ನೆಲೆಯೂರಿರುವ ಎಂಆರ್ಪಿಎಲ್ ಸಂಸ್ಥೆ ಜಿಲ್ಲೆಯ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಡಿವೈಎಫ್ಐ ಪ್ರತಿಭಟನೆ ನಡೆಸಿತು.
ಎಂಆರ್ಪಿಎಲ್ ಇತ್ತೀಚೆಗೆ 233 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ. ದಕ್ಷಿಣ ಕನ್ನಡದಲ್ಲಿ ನೆಲೆಯೂರಿರುವ ಈ ಸಂಸ್ಥೆ ಜಿಲ್ಲೆಯ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಸಲಾಯಿತು. ಇನ್ನು ಎಂಆರ್ಪಿಎಲ್ ಸಂಸ್ಥೆ ಸ್ಥಳೀಯರು ಮತ್ತು ಕನ್ನಡಿಗರನ್ನು ನೇಮಕಾತಿಯಲ್ಲಿ ಕಡೆಗಣಿಸಿರುವುದರಿಂದ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಬೇಕೆಂದು ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಭರಣ ನೋಟಿಸ್ ಕೂಡ ನೀಡಿದ್ದರು.
ಪ್ರತಿಭಟನೆ ವೇಳೆ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್ಪಿಎಲ್ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡಿ ಇದೀಗ ಮಾತು ತಪ್ಪಿದೆ. ನಮ್ಮ ನೆಲ-ಜಲ ಉಪಯೋಗಿಸುವ ಎಂಆರ್ಪಿಎಲ್ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು. ಈಗಾಗಲೇ ನಡೆದಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆ ತಡೆಹಿಡಿದು, ಹೊಸ ಪ್ರಕಟಣೆ ನೀಡಬೇಕು ಎಂದು ಒತ್ತಾಯಿಸಿದರು.