ಕರ್ನಾಟಕ

karnataka

ETV Bharat / city

Watch.. ಸ್ಕೂಟರ್​ನೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ: ಧರ್ಮಸ್ಥಳ ವಿಪತ್ತು ತಂಡದಿಂದ ರಕ್ಷಣೆ - ಧಾರಾಕಾರ ಮಳೆ

ಕೊಕ್ಕಡ ಸಮೀಪದ ಪೆರಿಯಶಾಂತಿ ಎಂಬಲ್ಲಿ ಸ್ಕೂಟರ್ ಸಮೇತ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಧರ್ಮಸ್ಥಳ ವಿಪತ್ತು ತಂಡದ ಸದಸ್ಯರು ರಕ್ಷಿಸಿದ್ದಾರೆ.

belthangady
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ಕೂಟರ್ ರಕ್ಷಣೆ

By

Published : Nov 15, 2021, 10:29 AM IST

ಬೆಳ್ತಂಗಡಿ: ತಾಲೂಕಿನಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದ್ದು ( Heavy Rain) ಸ್ಕೂಟರ್​ನೊಂದಿಗೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಧರ್ಮಸ್ಥಳ ವಿಪತ್ತು ತಂಡದ (Dharmasthala disaster management team) ಸದಸ್ಯರು ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನಾದ್ಯಂತ ನಿನ್ನೆ ಮಧ್ಯಾಹ್ನ ಪ್ರಾರಂಭವಾದ ಮಳೆ ರಾತ್ರಿ ತನಕ ಎಡಬಿಡದೆ ಸುರಿದ ಪರಿಣಾಮ ಕೆಲವು ರಸ್ತೆಗಳು ನೀರಿನಿಂದ ಜಲಾವೃತವಾಗಿದ್ದವು. ಕೊಕ್ಕಡ ಸಮೀಪದ ಪೆರಿಯಶಾಂತಿ ಎಂಬಲ್ಲಿ ಸ್ಕೂಟರ್ ಮೂಲಕ ನೀರು ತುಂಬಿದ ರಸ್ತೆಯಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಯೊಬ್ಬರು ರಸ್ತೆ ದಾಟಲು ಪ್ರಯತ್ನಿಸಿದಾಗ ನೀರಿನ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ಕೂಟರ್ ರಕ್ಷಣೆ

ಕಳೆದ ಎರಡು ದಿನಗಳ ಹಿಂದೆ ಗುಂಡ್ಯ ನದಿಯಲ್ಲಿ ಯುವಕನೊಬ್ಬ ಮುಳುಗಿದ್ದು ಕಾರ್ಯಾಚರಣೆ ಮುಗಿಸಿ ಊರಿಗೆ ವಾಪಸ್​ ಹೊರಟಿದ್ದ ಬೆಳಾಲು ಉಜಿರೆ ಘಟಕದ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು, ಈತ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಕೂಟರ್ ಅ​ನ್ನು ಹಗ್ಗ ಕಟ್ಟಿ ಮೇಲೆ ಎತ್ತಿದ್ದಾರೆ.

ಇನ್ನು ಸ್ಕೂಟರ್ ಸವಾರ ನಿಡ್ಲೆ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಬೆಳಾಲು ಘಟಕದ ಸ್ವಯಂಸೇವಕರಾದ ಹರೀಶ್, ಯಶೋಧರ, ಸಂತೋಷ್, ರವೀಂದ್ರ ಸೇರಿದಂತೆ 6 ಮಂದಿ ಪಾಲ್ಗೊಂಡಿದ್ದರು. ಇವರ ಈ ತುರ್ತು ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details