ಮಂಗಳೂರು :ನಗರದ ಬೈಕಂಪಾಡಿಯಲ್ಲಿರುವ ಕರ್ಕೇರ ಕುಟುಂಬಸ್ಥರ ಮೂಲ ಸ್ಥಾನದ ನಾಗ ಬನವನ್ನು ಹಾಳುಗೆಡವಿರುವ ದುಷ್ಕರ್ಮಿಗಳು ನಾಗ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ.
ಅಲ್ಲದೇ ಅಲ್ಲಿಯೇ ಇದ್ದ ಶಿವಲಿಂಗವೊಂದನ್ನು ಕದ್ದೊಯ್ದಿದ್ದಾರೆ. ಮೂಲಸ್ಥಾನದ ಕಾಣಿಕೆ ಹುಂಡಿ, ಕಚೇರಿಯಲ್ಲಿದ್ದ ಕಪಾಟು, ನಂದಿ ವಿಗ್ರಹವನ್ನೂ ಪುಡಿ ಮಾಡಿದ್ದಾರೆ ಎನ್ನಲಾಗ್ತಿದೆ. ಘಟನೆ ಯಾವಾಗ ನಡೆದಿದೆ ಎಂದು ಇನ್ನೂ ತಿಳಿದು ಬಂದಿಲ್ಲ.