ಕಾಂಗ್ರೆಸ್ನಿಂದ ಡೆಂಘೀ ನಿಯಂತ್ರಣ ಜಾಗೃತಿ ಅಭಿಯಾನ.. - ಸೊಳ್ಳೆ ಪರದೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಲ್ಬಣಗೊಂಡಿರುವ ಡೆಂಘೀ ಕಾಯಿಲೆ ಕುರಿತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಸಮಿತಿ ಕಾರ್ಯಕರ್ತರು ಡೆಂಘೀ ನಿಯಂತ್ರಣ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದಾರೆ.
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಲ್ಬಣಗೊಂಡಿರುವ ಡೆಂಘೀ ಕಾಯಿಲೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಸಮಿತಿ ಕಾರ್ಯಕರ್ತರು ಡೆಂಘೀ ನಿಯಂತ್ರಣ ಜಾಗೃತಿ ಅಭಿಯಾನ ಕಾರ್ಯಕ್ರಮ ಇಂದು ನಗರದ ಮಲ್ಲಿಕಟ್ಟೆಯ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಜಯರಾಮ್, 'ಡೆಂಘೀವಿನಲ್ಲಿ ನಾಲ್ಕು ವಿಧದ ವೈರಸ್ಗಳಿವೆ. ಇದು ಡೆಂಘೀ ಸಾಮಾನ್ಯ ಜ್ವರ, ರಕ್ತಸ್ರಾವ ಜ್ವರ ಹಾಗೂ ಪ್ರಜ್ಞೆ ತಪ್ಪುವ ಜ್ವರ. ಸಾಮಾನ್ಯ ಜ್ವರಕ್ಕಿಂತ ಉಳಿದೆರಡು ಜ್ವರಗಳು ತುಂಬಾ ಅಪಾಯಕಾರಿ. ಅಪಾಯಕಾರಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಒಂದು ವೇಳೆ ಚಿಕಿತ್ಸೆ ತೆಗೆದುಕೊಳ್ಳಲು ಹಿಂಜರಿದರೆ ಸಾವು ಸಂಭವಿಸುವ ಸಾಧ್ಯತೆಗಳೂ ಹೆಚ್ಚಿದೆ ಎಂದು ಎಚ್ಚರಿಸಿದರು.