ಮಂಗಳೂರು:ಕಲಿಕೆಗೆಂದು ಮಂಗಳೂರಿಗೆ ಬಂದ ಹೊರ ರಾಜ್ಯದ ಹಾಗು ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಕಾಲೇಜೊಂದು ದೀಪಾವಳಿ ಹಬ್ಬವನ್ನು ಸಂಸ್ಥೆಯಲ್ಲಿ ಆಚರಿಸಿ ಮಾದರಿಯಾಗಿದೆ.
ವಿವಿಧ ರಾಜ್ಯ, ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಮನೆಯಿಂದ ನಾವು ದೂರವಿದ್ದೇವೆ, ತಮಗೆ ಹಬ್ಬದ ಸಂಭ್ರಮವಿಲ್ಲ ಎಂಬ ನೋವು ಕಾಡದಂತೆ ಮಂಗಳೂರಿನ ಕರಾವಳಿ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ಅವರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೀಪಾವಳಿ ಆಚರಿಸಬೇಕೆಂದು ಪ್ರತಿ ವರ್ಷ ವ್ಯವಸ್ಥೆ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ, ದೀಪಗಳು ಮಾತ್ರವಲ್ಲದೆ ವಿದ್ಯಾರ್ಥಿಗಳ ಫ್ಯಾಶನ್ ಶೋ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.