ಬಂಟ್ವಾಳ (ದಕ್ಷಿಣ ಕನ್ನಡ) :ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ವಿತರಿಸಿದ ಕುರಿತು ಮೆಸೇಜ್ ಬಂದಿರುವ ಘಟನೆಬಂಟ್ಟಾಳ ತಾಲೂಕಿನ ವಿಟ್ಲ ಸಮೀಪದಪುಣಚ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಗೆ ಬಂತು ಕೋವಿಡ್ ಲಸಿಕೆಯ 2ನೇ ಡೋಸ್ ಸರ್ಟಿಫಿಕೇಟ್ ಆಗಿದ್ದೇನು?
ಪುಣಚ ಗ್ರಾಮದ ನಡುಮನೆ ಕುಂಞಣ್ಣ ಎನ್.ರೈ (31) ಎಂಬವರಿಗೆ ಕಳೆದ ಏಪ್ರಿಲ್ 20ರಂದು ಮೊದಲನೇ ಡೋಸ್ ನೀಡಲಾಗಿತ್ತು. ಆದರೆ, ಆಗಸ್ಟ್ 15 ರಂದು ಅವರು ನಿಧನ ಹೊಂದಿದ್ದರು. ಡಿಸೆಂಬರ್ 9ರಂದು ಕುಂಞಣ್ಣ ರೈ ಅವರ ಅಣ್ಣನ ಪುತ್ರ ರವಿಚಂದ್ರ ಅವರಿಗೆ ಆಸ್ಪತ್ರೆಯಿಂದ ಫೋನ್ ಬಂದಿತ್ತು.
ಕುಂಞಣ್ಣ ರೈ ಅವರಿಗೆ ಲಸಿಕೆ ಹಾಕಬೇಕಿದೆ ಎಂದು ಹೇಳಿದ್ದಾರೆ. ಆಗ ರವಿಚಂದ್ರ ಅವರು ಮೃತಪಟ್ಟ ವಿಷಯವನ್ನು ಅವರಿಗೆ ತಿಳಿಸಿದ್ದರೂ ಡಿ.10 ರಂದು ಅವರ ಹೆಸರಲ್ಲಿ ಕೋವಾಕ್ಸಿನ್ 2ನೇ ಡೋಸ್ ನೀಡಿದ ಸಂದೇಶ ಕಳುಹಿಸಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಒಮಿಕ್ರಾನ್ ಮೊದಲ ಸೋಂಕಿತ ಆಸ್ಪತ್ರೆಯಿಂದ ಡಿಸ್ಚಾರ್ಜ್
ಹಲವಾರು ಮಂದಿಗೆ ಪ್ರಥಮ ಡೋಸ್ ಮಾತ್ರ ನೀಡಲಾಗಿದ್ದರೂ, ಎರಡನೇ ಡೋಸ್ ಸಹ ನೀಡಲಾಗಿದೆ ಎಂಬ ವರದಿ ಬರುತ್ತಿವೆ. ಆರೋಗ್ಯ ಇಲಾಖೆಯ ಇಂಥ ಎಡವಟ್ಟುಗಳು ಹಲವಾರು ಸಂಭವಿಸಿದ್ದು, ಅವುಗಳಿಗೆ ಇದೊಂದು ಸೇರ್ಪಡೆ.