ಕರ್ನಾಟಕ

karnataka

ETV Bharat / city

ಕ್ಯಾಂಟೀನ್‌ನಲ್ಲಿ ಪೊಲೀಸ್ ಸಿಬ್ಬಂದಿ ಜೊತೆ ಕುಳಿತು ಡಿಸಿಪಿ ಊಟ: ಪೊಲೀಸ್ ಆಯುಕ್ತರಿಂದ ಶ್ಲಾಘನೆ - manglure Commissioner

ಮಂಗಳೂರು ಡಿಸಿಪಿ ಅವರು ಕ್ಯಾಂಟೀನ್​ನಲ್ಲಿ ಪೊಲೀಸ್ ಸಿಬ್ಬಂದಿ ಜೊತೆ ಆಹಾರ ಸೇವನೆ ಮಾಡಿದ್ದರು. ಈ ಕುರಿತಾದ ಫೋಟೋವನ್ನು ಮಂಗಳೂರು ಪೊಲೀಸ್ ಆಯುಕ್ತರು ಟ್ವೀಟ್ ಮಾಡಿ, ಡಿಸಿಪಿ ಅವರನ್ನು ಶ್ಲಾಘಿಸಿದ್ದಾರೆ.

DCP Arunangshu giri

By

Published : Sep 15, 2019, 9:59 AM IST

ಮಂಗಳೂರು: ಮಂಗಳೂರು ಡಿಸಿಪಿ, ಕ್ಯಾಂಟೀನ್​ನಲ್ಲಿ ಪೊಲೀಸ್ ಸಿಬ್ಬಂದಿ ಜೊತೆ ಆಹಾರ ಸೇವನೆ ಮಾಡಿದ್ದರು. ಈ ಕುರಿತಾದ ಫೋಟೋವನ್ನು ಮಂಗಳೂರು ಪೊಲೀಸ್ ಆಯುಕ್ತರು ಟ್ವೀಟ್ ಮಾಡಿ, ಡಿಸಿಪಿ ಅವರನ್ನು ಶ್ಲಾಘಿಸಿದ್ದಾರೆ.

ಡಿಸಿಪಿ ಆಹಾರ ಸೇವನೆ

ಮಂಗಳೂರು ನಗರ ಡಿಸಿಪಿ ಅರುಣಂಗ್ಶು ಗಿರಿ ಅವರು ಪೊಲೀಸ್ ಸಿಬ್ಬಂದಿ ಜೊತೆಗೆ ಸಿಎಆರ್ ಮೆನ್ಸ್ ಕ್ಯಾಂಟೀನ್​ನಲ್ಲಿ ಆಹಾರ ಸೇವನೆ ಮಾಡಿದ್ದರು. ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಡಿಸಿಪಿ ಫೋಟೋ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಆಯುಕ್ತರಿಂದ ಹಿಡಿದು ಪೊಲೀಸ್ ಸಿಬ್ಬಂದಿ ಸಮಾನ ಕಾರ್ಯಕ್ಕಾಗಿ ಕೆಲಸ ಮಾಡುವವರು ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ABOUT THE AUTHOR

...view details