ಕರ್ನಾಟಕ

karnataka

ETV Bharat / city

ಕೋವಿಡ್​​ ಬಗ್ಗೆ ಜಾಗೃತಿ ಮೂಡಿಸಲು ಫೀಲ್ಡಿಗಿಳಿದ ದ.ಕ ಜಿಲ್ಲಾಧಿಕಾರಿ

ಜನರು ಕೋವಿಡ್​ ನಿಯಮಗಳನ್ನು ಗಾಳಿಗೆ ತೂರುತ್ತಿರುವುದರಿಂದ ಸ್ವತಃ ದ.ಕ ಜಿಲ್ಲಾಧಿಕಾರಿಯೇ ಫೀಲ್ಡಿಗಿಳಿದು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

Dakshina Kannada DC Dr KV Rajendra Corona Awarness
ಕೋವಿಡ್​​ ಬಗ್ಗೆ ಜಾಗೃತಿ ಮೂಡಿಸಲು ಸ್ವತಃ ಫೀಲ್ಡಿಗಿಳಿದ ದ.ಕ.ಜಿಲ್ಲಾಧಿಕಾರಿ

By

Published : Mar 23, 2021, 4:13 PM IST

ಮಂಗಳೂರು:ಕೊರೊನಾ ಎರಡನೇ ಅಲೆಯ ಭೀತಿಯಿಂದ ಸ್ವತಃ ದ.ಕ ಜಿಲ್ಲಾಧಿಕಾರಿಯವರೇ ಫೀಲ್ಡಿಗಿಳಿದು ಸಾರ್ವಜನಿಕರಿಗೆ ಮಾಸ್ಕ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಕೋವಿಡ್​​ ಬಗ್ಗೆ ಜಾಗೃತಿ ಮೂಡಿಸಲು ಫೀಲ್ಡಿಗಿಳಿದ ದ.ಕ ಜಿಲ್ಲಾಧಿಕಾರಿ

ನಿನ್ನೆಯಂತೆ ಇಂದೂ ಕೂಡ ಜಿಲ್ಲಾಧಿಕಾರಿ ಕಚೇರಿಯ ಬಳಿ ಹಾಗೂ ಬಂದರು ಪ್ರದೇಶಗಳಿಗೆ ತೆರಳಿ ಕೊರೊನಾ ಪಾಠ ಮಾಡಿದ್ದಾರೆ. ಈ ಸಂದರ್ಭ ಉಡಾಫೆಯಿಂದ ಮಾತನಾಡಿದ ಉದ್ಯಮಿಗೆ ಕೊರೊನಾ ಪಾಠ ಮಾಡಿ, ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ, ಮಾಸ್ಕ್ ಹಾಕದೇ ವ್ಯವಹಾರ ಮಾಡುತ್ತಿದ್ದ ಹಲವಾರು ಅಂಗಡಿ ಮಾಲೀಕರಿಗೆ ಮಂಗಳೂರು ಪಾಲಿಕೆ ವತಿಯಿಂದ ದಂಡ ವಿಧಿಸಲಾಗಿದೆ.

ಬಸ್, ಬೈಕ್, ಕಾರು, ಆಟೋ ರಿಕ್ಷಾ ಹಾಗೂ ರಸ್ತೆಗಳಲ್ಲಿ ಮಾಸ್ಕ್ ಧರಿಸಿದೆ ಸಂಚಾರ ಮಾಡುತ್ತಿದ್ದ ಸಾರ್ವಜನಿಕರನ್ನು ತಡೆದು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಕೊರೊನಾದ ಎರಡನೇ ಅಲೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಧಿಕಾರಿಗಳು ಎಲ್ಲಾ ಕಡೆ ತೆರಳಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಸಹಕಾರ ನೀಡದ ಉದ್ದಿಮೆದಾರರ ಉದ್ದಿಮೆ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ ಎಂದು ಹೇಳಿದರು.

ಓದಿ;ಐದು ನೋಟಿಸ್​ಗಳಿಗೂ ಯುವತಿಯಿಂದ ನೋ ರೆಸ್ಪಾನ್ಸ್​: ವಿಧಾನಸೌಧಕ್ಕೆ ದೌಡಾಯಿಸಿದ ಎಸ್​ಐಟಿ ಅಧಿಕಾರಿಗಳು

ABOUT THE AUTHOR

...view details