ಕರ್ನಾಟಕ

karnataka

ETV Bharat / city

ದಕ್ಷಿಣ ಕನ್ನಡ: ಕೊರೊನಾಗೆ 7 ಜನ ಬಲಿ, 498 ಮಂದಿ ಗುಣಮುಖ - covid19 news

ಜಿಲ್ಲೆಯಲ್ಲಿ ಈವರೆಗೆ 7825 ಮಂದಿಗೆ ಕೊರೊನಾ ದೃಢಪಟ್ಟಿದೆ. ಈವರೆಗೆ ಗುಣಮುಖರಾದವರ ಸಂಖ್ಯೆ 5232 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2349 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

By

Published : Aug 12, 2020, 8:37 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು ಒಂದೇ ದಿನ 7 ಮಂದಿ ಸಾವನ್ನಪ್ಪಿದ್ದು, 229 ಮಂದಿಗೆ ಪಾಸಿಟಿವ್ ಬಂದಿದೆ.

ಇಂದು 498 ಮಂದಿ ಗುಣಮುಖರಾಗಿದ್ದಾರೆ. ಸಾವನ್ನಪ್ಪಿದ 7 ಮಂದಿಯಲ್ಲಿ ಇಬ್ಬರು ಮಂಗಳೂರು ತಾಲೂಕು, ಮೂಡಬಿದ್ರೆ ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ತಲಾ ಒಬ್ಬರು ಮತ್ತು ಹೊರಜಿಲ್ಲೆಯ ಮೂರು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 244 ಕ್ಕೆ ಏರಿಕೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 229 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ ಮಂಗಳೂರು ತಾಲೂಕಿನ 133, ಬಂಟ್ವಾಳ ತಾಲೂಕಿನ 45, ಪುತ್ತೂರು ತಾಲೂಕಿನ 22, ಸುಳ್ಯ ತಾಲೂಕಿನ 5, ಬೆಳ್ತಂಗಡಿ ತಾಲೂಕಿನ 14 ಮತ್ತು ಹೊರಜಿಲ್ಲೆಯ 10 ಮಂದಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 7825 ಮಂದಿಗೆ ಕೊರೊನಾ ದೃಢಪಟ್ಟಿದೆ. ಈವರೆಗೆ ಗುಣಮುಖರಾದವರ ಸಂಖ್ಯೆ 5232 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2349 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details