ಕಡಬ(ದಕ್ಷಿಣಕನ್ನಡ) :ಜಿಲ್ಲೆಯ ಪುಟ್ಟ ಗ್ರಾಮದ ಯುವಕನೊಬ್ಬ ಇಂಡೋನೇಷ್ಯಾದಲ್ಲಿ ಪ್ರಖ್ಯಾತ ಯೋಗ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಎರ್ಮಾಯಿಲ್ ಗ್ರಾಮದ ದೀಪಕ್ ಎಂಬುವರು, ಇಂಡೋನೇಷ್ಯಾದಲ್ಲಿ ಯೋಗ ಗುರುಗಳಾಗಿ ಪ್ರಸಿದ್ಧರಾಗಿದ್ದಾರೆ.
ಬಾಲ್ಯದಲ್ಲೇ ಯೋಗದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ದೀಪಕ್ ಎರ್ಮಾಯಿಲ್, ಯೋಗ ಕಲಿತು ಬೆಂಗಳೂರಿನಲ್ಲಿ ಯೋಗ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರದಲ್ಲಿ ವಿದೇಶದಿಂದ ಹಲವಾರು ಅವಕಾಶಗಳು ಒದಗಿ ಬಂದಿವೆ. ಸದ್ಯ ಇಂಡೋನೇಷ್ಯಾದಲ್ಲಿ ಯೋಗ ತರಬೇತುದಾರರಾಗಿದ್ದಾರೆ.