ಕರ್ನಾಟಕ

karnataka

ETV Bharat / city

ಮಂಗಳೂರಿನಲ್ಲಿ 6 ಕೋಟಿ ವೆಚ್ಚದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ : ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ

ಇದು ಮಂಗಳೂರಿಗೆ ಹೊಸ ಪರಿಕಲ್ಪನೆಯಾಗಿದೆ. ಮಂಗಳೂರಿನ ಪರಂಪರೆಯನ್ನು ಉಳಿಸಿಕೊಡುವ ನಿಟ್ಟಿನಲ್ಲಿ ನವ ವಿನ್ಯಾಸ ಕೊಡಲು ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರ ಇದರ ಕಾಮಗಾರಿ ಪೂರ್ಣಗೊಂಡು ಜನರಿಗೆ ಉಪಯೋಗವಾಗಲಿ..

Mangalore
ನಳಿನ್ ಕುಮಾರ್ ಕಟೀಲು

By

Published : Apr 19, 2021, 5:41 PM IST

Updated : Apr 19, 2021, 7:59 PM IST

ಮಂಗಳೂರು :ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ಮನಪಾ ವ್ಯಾಪ್ತಿಯ ಮಾರ್ನೆಮಿಕಟ್ಟೆಯಲ್ಲಿ 6.4 ಕೋಟಿ ರೂ. ವೆಚ್ಚದಲ್ಲಿ 12 ಕಿ.ಮೀ. ಉದ್ದದ ಸೈಕ್ಲಿಂಗ್ ಟ್ರ್ಯಾಕ್​ಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು.

ಮಂಗಳೂರಿನ ಸೈಕ್ಲರ್ಸ್​ಗಳ ಮನವಿಯಂತೆ ವಿಶೇಷ ಮುತುವರ್ಜಿಯಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದೇ ವೇಳೆ ಮಾತನಾಡಿದ ಕಟೀಲ್ ಅವರು, ಶಾಸಕ ವೇದವ್ಯಾಸ ಕಾಮತ್ ಅವರು ಜನರ ಭಾವನೆಗಳಿಗೆ ಸರಿಯಾಗಿ ಸ್ಪಂದಿಸ್ತಾ, ಸ್ಮಾರ್ಟ್ ಸಿಟಿ ಯೋಜನೆಗಳಿಗೆ ವೇಗ ಕೊಡುವಂತಹ ಕಾರ್ಯ ಮಾಡುತ್ತಿದ್ದಾರೆ.

ಮೈಸೂರು ರೀತಿಯಲ್ಲಿ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣದ ಬೇಡಿಕೆಗೆ ಸ್ಪಂದಿಸಿ ಕೋಟಿ ರೂ. ವೆಚ್ಚದಲ್ಲಿ 12 ಕಿ.ಮೀ. ಉದ್ದದ ಸೈಕ್ಲಿಂಗ್ ಟ್ರ್ಯಾಕ್​ಗೆ ಇಂದು ಶಿಲಾನ್ಯಾಸ ಮಾಡಲಾಗಿದೆ ಎಂದರು.

ಸೈಕಲ್ ಟ್ರ್ಯಾಕ್ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ

ಇದು ಮಂಗಳೂರಿಗೆ ಹೊಸ ಪರಿಕಲ್ಪನೆಯಾಗಿದೆ. ಮಂಗಳೂರಿನ ಪರಂಪರೆಯನ್ನು ಉಳಿಸಿಕೊಡುವ ನಿಟ್ಟಿನಲ್ಲಿ ನವ ವಿನ್ಯಾಸ ಕೊಡಲು ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರ ಇದರ ಕಾಮಗಾರಿ ಪೂರ್ಣಗೊಂಡು ಜನರಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ:ಇನ್ನೂ 2-3 ದಿನಗಳ ಕಾಲ ಮಾತ್ರ ಮುಷ್ಕರ, ಸರ್ಕಾರದ ಜತೆ ಸೌಹಾರ್ದಯುತ ಸಭೆ- ಕೋಡಿಹಳ್ಳಿ

Last Updated : Apr 19, 2021, 7:59 PM IST

ABOUT THE AUTHOR

...view details