ಮಂಗಳೂರು: ಗೂಡ್ಸ್ ರೈಲಿನ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋದ ಯುವಕನಿಗೆ ವಿದ್ಯುತ್ ತಂತಿ ತಗುಲಿ ಆಸ್ಪತ್ರೆ ಸೇರಿದ ಘಟನೆ ಸುರತ್ಕಲ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಸಲಾನ್ ಪಾರಸ್ (21) ಎಂಬಾತ ವಿದ್ಯುತ್ ಅಘಾತಕ್ಕೊಳಗಾದವನು. ಈತ ಸುರತ್ಕಲ್ ರೈಲ್ವೆ ನಿಲ್ದಾಣದ ಬಳಿಯ ಅಗರಮೇಲು ಎಂಬಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಮೇಲೆ ನಿಂತು ಸೆಲ್ಪಿ ತೆಗೆಯಲು ಹೋಗಿದ್ದ. ಈ ವೇಳೆ ಹೈ ವೋಲ್ಟೇಜ್ ತಂತಿ ತಗುಲಿ ದೇಹ ಭಾಗಶಃ ಸುಟ್ಟು ಹೋಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.